ಮಂಗಳವಾರ, ಸೆಪ್ಟೆಂಬರ್ 22, 2020
20 °C

‘ಕನ್ನಡ ಕೋಗಿಲೆ ಸೂಪರ್ ಸೀಸನ್‌’ 31ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಇದೇ 31ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ‘ಕನ್ನಡ ಕೋಗಿಲೆ ಸೂಪರ್‌ ಸೀಸನ್‌’ ಪ್ರಾರಂಭವಾಗಲಿದೆ.

ಬೇರೆ ಸಂಗೀತ ಸ್ಪರ್ಧೆ ಅಥವಾ ಶೋಗಳಲ್ಲಿ ಭಾಗವಹಿಸಿ, ಕೂದಲೆಳೆಯ ಅಂತರದಲ್ಲಿ ಗೆಲುವನ್ನು ತಪ್ಪಿಸಿಕೊಂಡವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಾಹಿನಿ ಪ್ರಕಟಣೆ ತಿಳಿಸಿದೆ. 

‘ಕನ್ನಡ ಕೋಗಿಲೆ’ ಮೊದಲನೇ ಆವೃತ್ತಿಯ ಫೈನಲ್‌ ಸುತ್ತಿನ ಸ್ಪರ್ಧಿಗಳಾದ ಪುತ್ತೂರಿನ ಅಖಿಲಾ ಪಜಿಮಣ್ಣು, ರಾಯಚೂರಿನ ಕರಿಬಸವ ಹಾಗೂ ಎರಡನೇ ಆವೃತ್ತಿಯ ರನ್ನರ್‌ ಅಪ್‌ಗಳಾದ ಶಿವಮೊಗ್ಗದ ಪಾರ್ಥ ಚಿರಂತನ್ ಮತ್ತು ಬೆಂಗಳೂರಿನ ನೀತೂ ಸುಬ್ರಹ್ಮಣ್ಯಂ ಅವರು ಪ್ರಶಸ್ತಿಗಾಗಿ ಮತ್ತೊಮ್ಮೆ ಹೋರಾಡಲಿದ್ದಾರೆ. ಇವರಲ್ಲದೆ, ಮನೋಜವಂ ಆತ್ರೇಯ, ಪುರುಷೋತ್ತಮ, ಸ್ಪರ್ಶ ಆರ್.ಕೆ., ನಿಹಾರಿಕಾ, ನಿತಿನ್ ರಾಜಾರಾಂ ಶಾಸ್ತ್ರಿ, ದರ್ಶಿನಿ ಶೆಟ್ಟಿ, ಅನಂತರಾಜ್ ಮಿಸ್ತ್ರಿ, ಅರುಂಧತಿ ವಸಿಷ್ಠ, ಅದಿತಿ ಮತ್ತು ತನುಷ್ ರಾಜ್ ಕೂಡಾ ಸೆಣಸಾಡಲಿದ್ದಾರೆ. ತೀರ್ಪುಗಾರರಾಗಿ ಸಾಧು ಕೋಕಿಲಾ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ಇರಲಿದ್ದಾರೆ. ಸಿರಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು