ಬುಧವಾರ, ಆಗಸ್ಟ್ 10, 2022
21 °C

ಡಬ್ಬು ರತ್ನಾನಿ ಹೊಸ ಕ್ಯಾಲೆಂಡರ್‌ನಲ್ಲಿ ಮಿಂಚು ಹರಿಸಿದ ಕಿಯಾರಾ!

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೆಲಿಬ್ರಿಟಿ ಫೋಟೊಗ್ರಾಪರ್ ಡಬ್ಬು ರತ್ನಾನಿ ಅವರ ಬಳಿ, ಸ್ಟಾರ್‌ ನಟ ನಟಿಯರೇ ಒಂದಾದರೂ ಪೋಟೊ ತೆಗಿಸಿಕೊಳ್ಳಬೇಕು ಎಂಬ ಆಸೆ ವ್ಯಕ್ತಪಡಿಸುತ್ತಾರೆ. ಫೋಟೊಗ್ರಫಿಯಲ್ಲಿ ಅಷ್ಟೊಂದು ಹೆಸರು ಮಾಡಿದ್ದಾರೆ ಡಬ್ಬು.

ಅವರು ಪ್ರತಿ ವರ್ಷ ತಾವು ಆಯ್ಕೆ ಮಾಡುವ ಸ್ಟಾಟ್ ನಟ ನಟಿಯರ ಫೋಟೊಗಳ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಾರೆ. ಕ್ಯಾಲೆಂಡರ್ ಬೆಲೆ ಲಕ್ಷಾಂತರ ರೂಪಾಯಿ ಇರುತ್ತದೆ.

ಇದೀಗ ಡಬ್ಬು ಅವರು ತಮ್ಮ 2021ರ ಕ್ಯಾಲೆಂಡರ್‌ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಅವರ ಫೋಟೊಗಳನ್ನು ತೆಗೆದಿದ್ದಾರೆ. ಈ ಕ್ಯಾಲೆಂಡರ್‌ನಲ್ಲಿ ಕಿಯಾರಾ ಮಿಂಚು ಹರಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಕ್ಯಾಲೆಂಡರ್‌ನ ಕಿಯಾರಾ ಅವರ ಒಂದು ಫೋಟೊ ಹಂಚಿಕೊಂಡಿದ್ದಾರೆ ಡಬ್ಬು. ಫೋಟೊ ಸಖತ್ ವೈರಲ್ ಆಗಿದೆ.

ಅಲ್ಲದೇ ಡಬ್ಬು ಅವರು ಕಿಯಾರಾ ಜೊತೆ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಸೆಲಿಬ್ರಿಟಿಗಳು ತಮ್ಮ ಪೋಷಕರ ಜೊತೆ ಫೋಟೊಶೂಟ್‌ಗೆ ತೆರಳುತ್ತಾರೆ. ಆಗ ನಾನಿನ್ನು ಸಹಾಯಕ ಫೋಟೊಗ್ರಾಫರ್ ಆಗಿದ್ದರೂ ನನ್ನ ಬಳಿ ಏಕಾಂಗಿಯಾಗಿ ಫೋಟೊಶೂಟ್‌ಗೆ ಬಂದಿದ್ದರು. ಇಂದಿಗೂ ಅದೇ ವಿಶ್ವಾಸ ನಮ್ಮಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು