ಮಂಗಳವಾರ, ಜೂನ್ 28, 2022
27 °C

ಬಾಲಿವುಡ್‌ ನಟ ದಿಲೀಪ್‌ಕುಮಾರ್ ಗುಣಮುಖ: ಆಸ್ಪತ್ರೆಯಿಂದ ಮನೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಉಸಿರಾಟದ ತೊಂದರೆಯಿಂದ ಐದು ದಿನಗಳ ಹಿಂದೆ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಬಾಲಿವುಡ್‌ ನಟ ದಿಲೀಪ್ ಕುಮಾರ್ ಅವರು ಪೂರ್ಣ ಗುಣಮುಖರಾಗಿ ಶುಕ್ರವಾರ ಮನೆಗೆ ತೆರಳಿದ್ದಾರೆ.

98ರ ಹರೆಯದ ಬಾಲಿವುಡ್‌ನ ‘ದಂತಕತೆ‘ ದಿಲೀಪ್ ಕುಮಾರ್, ಮುಂಬೈನ ಉಪನಗರದಲ್ಲಿರುವ ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನೀಡುವ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು.

‘ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರಾರ್ಥನೆಯೊಂದಿಗೆ, ಈ ದಿಲೀಪ್ ಸಾಬ್‌ ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದಾನೆ. ನಿಮ್ಮ ಅಪಾರ ಪ್ರೀತಿ ಮತ್ತು ವಾತ್ಸಲ್ಯ ಯಾವಾಗಲೂ ಸಾಹೇಬ್‌ನ ಹೃದಯವನ್ನು ತಲುಪುತ್ತದೆ‘ ಎಂದು ದಿಲೀಪ್‌ ಕುಮಾರ್ ಅವರ ಅಧಿಕೃತ ಟ್ವಿಟರ್ ನಿರ್ವಹಿಸುವರು ಪೋಸ್ಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಅನೇಕ ಅಭಿಮಾನಿಗಳು, ವಿಶೇಷವಾಗಿ ಸಿನಿಮಾ ಕ್ಷೇತ್ರದ ಗಣ್ಯರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ದಿಲೀಪ್ ಕುಮಾರ್ ಅವರನ್ನು ಗುರುವಾರವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕಿತ್ತು. ಆದರೆ, ಅವರ ಕುಟುಂಬದ ಸದಸ್ಯರು ಮತ್ತು ಕುಟುಂಬದ ವೈದ್ಯರ ಸಲಹೆ ಮೇರೆಗೆ ಅವರನ್ನು ಇನ್ನೊಂದು ದಿನ ಆಸ್ಪತ್ರೆಯಲ್ಲಿ ನಿಗಾದಲ್ಲಿಡಲು ತೀರ್ಮಾನಿಸಿ, ಶುಕ್ರವಾರ ಮನೆಗೆ ಕಳುಹಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು