ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video:ವೇದಿಕೆಯಲ್ಲಿ ಎಲ್ಲರೆದುರು ಗಾಯಕನನ್ನು ಬರಸೆಳೆದು ಚುಂಬಿಸಿದ ಅಭಿಮಾನಿ ಯುವತಿ

Last Updated 19 ಸೆಪ್ಟೆಂಬರ್ 2022, 11:39 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್ (ಅಮೆರಿಕ): ಪಾಪ್ ಗಾಯಕನಿಗೆ ಅಭಿಮಾನಿ ಯುವತಿಯೊಬ್ಬಳು ವೇದಿಕೆಯಲ್ಲಿಯೇ ಎಲ್ಲರೆದುರು ಬರಸೆಳೆದು ಚುಂಬಿಸಿರುವ ವಿಡಿಯೊ ಒಂದು ವೈರಲ್ ಆಗಿದೆ.

ಸ್ಪೇನ್‌ನಪಾಪ್ ಗಾಯಕ ಎನ್‌ರಿಕ್ ಇಗ್‌ಲೇಸಿಯಾ(Enrique Iglesias) ಅವರಿಗೆ ಈ ಪ್ರಸಂಗ ಎದುರಾಗಿದ್ದು, ಸ್ವತಃ ಅವರೇ ಈ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಲಾಸ್ ಏಂಜಲೀಸ್‌ನಲ್ಲಿ ಕಳೆದ ಶುಕ್ರವಾರರಾತ್ರಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ವೇಳೆ ವೇದಿಕೆಯಲ್ಲಿ ಅಭಿಮಾನಿ ಯುವತಿಯೊಬ್ಬಳುಗಾಯಕ ಎನ್‌ರಿಕ್ ಅವರನ್ನು ಮಾತನಾಡಿಸಲು ಬಂದಾಗಎನ್‌ರಿಕ್ ಅವರು ‍ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಆದರೆ, ಇದನ್ನೇ ಸಲುಗೆಯಾಗಿ ತೆಗೆದುಕೊಂಡ ಯುವತಿ ಎನ್‌ರಿಕ್ ಅವರನ್ನು ಬರಸೆಳೆದು ಧೀರ್ಘ ಚುಂಬನ ನೀಡಿದ್ದಾರೆ. ಅಲ್ಲದೇ ಈ ಘಟನೆಯನ್ನು ಸೆಲ್ಪಿ ಫೋಟೊ ಕೂಡ ತೆಗೆದುಕೊಂಡಿದ್ದಾರೆ.

47 ವರ್ಷದ ಗಾಯಕ ಎನ್‌ರಿಕ್ ಅವರು ಮಾಜಿ ಟೆನ್ನಿಸ್ ತಾರೆ ಅನ್ನಾ ಕೋರ್‌ನಿಕೋವಾ ಅವರನ್ನು ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ.

ಯುವತಿ ಎನ್‌ರಿಕ್ ಅವರಿಗೆ ಚುಂಬಿಸುವ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಇನ್‌ಸ್ಟಾಗ್ರಾಂನಲ್ಲಿ ಈ ಎನ್‌ರಿಕ್ ದಂಪತಿಯ ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT