ಮಂಗಳವಾರ, ಮೇ 24, 2022
30 °C
‘ಹನಿಮೂನ್‌’ ಟ್ರೇಲರ್‌ ಬಿಡುಗಡೆ ಮಾಡಿದ ನಟ ಶಿವರಾಜ್‌ಕುಮಾರ್‌

ಶ್ರೀ ಮುತ್ತು ಫಿಲಂನಿಂದ ಮತ್ತಷ್ಟು ವೆಬ್‌ಸಿರೀಸ್‌, ಕಿರುಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಶಿವರಾಜ್‌ಕುಮಾರ್‌ ಅವರ ಶ್ರೀ ಮುತ್ತು ಫಿಲಂ ನಿರ್ಮಾಣ ಸಂಸ್ಥೆಯ ವೆಬ್‌ಸಿರೀಸ್‌, ನಾಗಭೂಷನ್‌ ಹಾಗೂ ಸಂಜನಾ ಆನಂದ್‌ ನಟನೆಯ ‘ಹನಿಮೂನ್‌’ ಮೇ 20ರಂದು ವೂಟ್‌ನಲ್ಲಿ ರಿಲೀಸ್‌ ಆಗಲಿದೆ. 

ಗುರುವಾರ ವೆಬ್‌ಸಿರೀಸ್‌ನ ಟ್ರೇಲರ್‌ ಅನ್ನು ಶಿವರಾಜ್‌ಕುಮಾರ್‌ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ‘ಗೀತಾ ಪಿಕ್ಚರ್ಸ್‌ ಹಾಗೂ ಶ್ರೀಮುತ್ತು ಫಿಲಂನಿಂದ ಇನ್ನಷ್ಟು ವೆಬ್‌ಸಿರೀಸ್‌, ಕಿರುಚಿತ್ರಗಳನ್ನು ಮಾಡುತ್ತೇವೆ. ಮತ್ತಷ್ಟು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತೇವೆ. ಮೇ 20ರಂದು ‘ಹನಿಮೂನ್‌’ ಬಿಡುಗಡೆಯಾಗುತ್ತಿದೆ. 36 ವರ್ಷ ಹಿಂದೆ ಮೇ 19ರಂದು ನಾನು, ಗೀತಾ ಮದುವೆಯಾದ ದಿನ. ‘ಹನಿಮೂನ್‌’ ಸರಿಯಾದ ಸಮಯಕ್ಕೇ ಬರುತ್ತಿದೆ’ ಎಂದು ಶಿವರಾಜ್‌ಕುಮಾರ್‌ ಮುಗುಳ್ನಕ್ಕರು.

‘ವೆಬ್‌ಸಿರೀಸ್‌ ಬಗ್ಗೆ ನನಗೆ ಏನೂ ಮಾಹಿತಿ ಇರಲಿಲ್ಲ. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದೆ. ಒಮ್ಮೆ ಮಗಳು ನಿವೇದಿತ ವೆಬ್‌ಸಿರೀಸ್‌ ನೋಡಲು ಹೇಳಿದಳು. ನಂತರದಲ್ಲಿ ವೆಬ್‌ಸಿರೀಸ್‌ ನಿರ್ಮಾಣ ಮಾಡಬೇಕು ಎಂದು ನಿವಿ ಬಂದಾಗ, ನಾನು ಒಪ್ಪಿಗೆ ನೀಡಿದೆ. ಭರವಸೆ ಇದ್ದರೆ ಏನನ್ನೂ ಸಾಧಿಸಬಹುದು. ನಾಗಭೂಷಣ್‌ ನಟನೆಯ ಜೊತೆಗೆ ಕಥೆಯನ್ನೂ ಬರೆದಿದ್ದಾರೆ ಎಂದು ತಿಳಿದು ಆಶ್ಚರ್ಯಪಟ್ಟೆ’ ಎಂದರು.

‘ಒಟಿಟಿಯಿಂದ ಏಕಪರದೆ ಚಿತ್ರಮಂದಿರಗಳಿಗೆ ಹಾನಿಯಾಗುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ಏಕೆಂದರೆ ಕೆಜಿಎಫ್‌–2 ಇಷ್ಟರ ಮಟ್ಟಿಗೆ ಹಿಟ್‌ ಆಗಲಿಲ್ಲವೇ. ಕೋವಿಡ್‌ ಸಮಯದಲ್ಲೇ ರಿಲೀಸ್‌ ಆಗಿದ್ದ ಆ್ಯಕ್ಟ್‌–1978 ಕೂಡಾ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಒಳ್ಳೆಯ ವಿಷಯಾಧಾರಿತ ಸಿನಿಮಾಗಳನ್ನು ಪ್ರೇಕ್ಷಕರು ಕೈಬಿಟ್ಟಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿವೇದಿತ ಶಿವರಾಜ್‌ಕುಮಾರ್‌ ಈ ವೆಬ್‌ಸಿರೀಸ್‌ ನಿರ್ಮಾಪಕರು. ಆರು ಕಂತುಗಳಲ್ಲಿ ಈ ಸಿರೀಸ್‌ ಬಿಡುಗಡೆಯಾಗುತ್ತಿದ್ದು, ನಿರ್ದೇಶಕ ಪವನ್‌ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ ಅಪೂರ್ವ ಭಾರಧ್ವಾಜ್‌, ಆನಂದ್‌ ನೀನಾಸಂ ಮತ್ತು ಅರ್ಚನಾ ಕೊಟ್ಟಿಗೆ ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು