ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತಾ ಮಂಗೇಶ್ಕರ್ ಸಹೋದರ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿರ

Last Updated 25 ಏಪ್ರಿಲ್ 2022, 6:21 IST
ಅಕ್ಷರ ಗಾತ್ರ

ಖ್ಯಾತ ಗಾಯಕಿ, ದಿವಂಗತ ಲತಾ ಮಂಗೇಶ್ಕರ್‌ ಅವರ ಕಿರಿಯ ಸಹೋದರಸಂಗೀತಗಾರ ಹೃದಯನಾಥ್‌ ಮಂಗೇಶ್ಕರ್‌ (84) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯನಾಥ್‌ 'ಆರೋಗ್ಯವಾಗಿದ್ದಾರೆ', ಇನ್ನು ಹತ್ತು ದಿನಗಳಲ್ಲಿ ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಅವರ ಮಗ ಆದಿನಾಥ್ ಮಂಗೇಶ್ಕರ್‌ ತಿಳಿಸಿದ್ದಾರೆ.

ಭಾನುವಾರ ನಡೆದ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ,ಸಭಿಕರನ್ನುದ್ದೇಶಿಸಿ ಮಾತನಾಡಿದ ಆದಿನಾಥ್, ತಮ್ಮ ತಂದೆಯವರೇ ಪ್ರತಿವರ್ಷ ಸ್ವಾಗತ ಭಾಷಣ ಮತ್ತು ಟ್ರಸ್ಟ್ ಕುರಿತು ಮಾಹಿತಿ ನೀಡುತ್ತಿದ್ದರು. ಆದರೆ, ಈ ವರ್ಷ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

'ಇಷ್ಟು ವರ್ಷ ನನ್ನ ತಂದೆ ಪಂಡಿತ್‌ ಹೃದಯನಾಥ್‌ ಮಂಗೇಶ್ಕರ್‌ ಅವರೇ ನಮ್ಮ ಟ್ರಸ್ಟ್‌ ಬಗ್ಗೆ ಮಾಹಿತಿ ನೀಡುತ್ತಿದ್ದರು. ಸ್ವಾಗತ ಭಾಷಣ ಮಾಡುತ್ತಿದ್ದರು. ಸದ್ಯ ಅವರು ಆಸ್ಪತ್ರೆಯಲ್ಲಿರುವುದರಿಂದ, ಈ ಬಾರಿ ಅದು ಸಾಧ್ಯವಾಗುತ್ತಿಲ್ಲ' ಎಂದಿದ್ದಾರೆ. ಮುಂದುವರಿದು, 'ದೇವರ ದಯೆಯಿಂದ ಇನ್ನು 8–10 ದಿನಗಳಲ್ಲಿ ಮನೆಗೆ ಮರಳಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ' ಎಂದು ತಿಳಿಸಿದ್ದಾರೆ.

ಆದರೆ, ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಕಾರಣ ಏನು ಎಂಬುದನ್ನು ಆದಿನಾಥ್ ಬಹಿರಂಗಪಡಿಸಿಲ್ಲ.

ಇದೇ ವರ್ಷ ಫೆಬ್ರುವರಿಯಲ್ಲಿ ಬಹುಅಂಗಾಂಗ ವೈಫಲ್ಯದಿಂದ ಲತಾ ಮಂಗೇಶ್ಕರ್‌ (92) ನಿಧನರಾದರು. ಅವರ ನೆನಪಿನಲ್ಲಿ ನೀಡಲಾಗುತ್ತಿರುವ ಮೊದಲ ವರ್ಷದ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಲಾಗಿದೆ.

ದೀನಾನಾಥ್‌ ಮಂಗೇಶ್ಕರ್‌ ಅವರ 80ನೇ ಪುಣ್ಯತಿಥಿಯ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರ, ಸಮಾಜ ಮತ್ತು ಜನರಿಗೆ ಅಸಾಮಾನ್ಯ ಕೊಡುಗೆ ನೀಡಿರುವವರಿಗೆ ಪ್ರತಿ ವರ್ಷ 'ಲತಾ ದೀನಾನಾಥ್‌ ಮಂಗೇಶ್ಕರ್‌' ಪುರಸ್ಕಾರ ನೀಡಲಾಗುತ್ತದೆ ಎಂದು ಮಾಸ್ಟರ್‌ ದೀನಾನಾಥ್‌ ಮಂಗೇಶ್ಕರ್‌ ಸ್ಮೃತಿ ಪ್ರತಿಷ್ಠಾನ ಚಾರಿಟೆಬಲ್‌ ಟ್ರಸ್ಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT