ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವೇಷದಲ್ಲಿ ಬರ್ತಿದ್ದಾರೆ ‘ಹಂಬಲ್ ಪೊಲಿಟೀಷಿಯನ್ ನೋಗರಾಜ್’

Last Updated 18 ಡಿಸೆಂಬರ್ 2021, 8:40 IST
ಅಕ್ಷರ ಗಾತ್ರ

‘ಹಂಬಲ್ ಪೊಲಿಟೀಷಿಯನ್ ನೋಗರಾಜ್’ ಈ ಸಿನಿಮಾ ಮೂಲಕ ಎಲ್ಲರನ್ನು ರಂಜಿಸಿದ್ದ ಡ್ಯಾನಿಶ್ ಸೇಠ್ ಈಗ ವೆಬ್‌ಸೀರಿಸ್ ಮೂಲಕ ಮತ್ತೊಮ್ಮೆ ರಂಜಿಸಲು ಬರುತ್ತಿದ್ದಾರೆ. ‘ಹಂಬಲ್‌ ಪೊಲಿಟೀಷಿಯನ್‌...’ ಹೆಸರಿನಲ್ಲೇ ಈ ಹಾಸ್ಯ ಸರಣಿ ಬಿಡುಗಡೆ ಆಗುತ್ತಿದೆ. ಟೀಸರ್‌ ಈಗಾಗಲೇ ಭರ್ಜರಿ ಸದ್ದು ಮಾಡಿದೆ.

ವೂಟ್‌ಸೆಲೆಕ್ಟ್‌ನ ಒಟಿಟಿ ವೇದಿಕೆಯಲ್ಲಿ ಈ ಸರಣಿ ಜ. 6ರಿಂದ ಪ್ರಸಾರವಾಗಲಿದೆ. ಸರಣಿ 10 ಕಂತುಗಳನ್ನು ಹೊಂದಿದೆ.

ಡ್ಯಾನಿಷ್‌ ಸೇಠ್‌ ಜತೆ ಪ್ರಕಾಶ್ ಬೆಳವಾಡಿ, ವಿನಯ್ ಚೆಂಡೂರ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾದ್‌ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಡ್ಯಾನಿಶ್ ಸೇಠ್‌ ಒಬ್ಬ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ. ನಂತರ ರೆಸಾರ್ಟ್ ರಾಜಕೀಯ, ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾರೆ ಹಾಗೂ ಅಧಿಕಾರಿ ದುರಾಸೆ, ಭ್ರಷ್ಟಾಚಾರವನ್ನು ವಿಡಂಬನಾತ್ಮಕವಾಗಿ ತೆಗೆದುಕೊಂಡು ಹೋಗುವ ಮೂಲಕ ರೋಲರ್ ಕೋಸ್ಟರ್ ಆಗಿ ನೋಗರಾಜ್ ಜನರನ್ನು ರಂಜಿಸಲಿದ್ದಾರೆ. 10 ಎಪಿಸೋಡ್‌ನ ಈ ವೆಬ್‌ಸೀರಿಸ್ ಪೂರ್ತಿ ಪಂಚಿಂಗ್ ಡೈಲಾಗ್ ಹಾಗೂ ನಗುವಿಕೆ‌ಗೆ ಕೊರತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT