ದಡಕ್‌ ಜಾಹ್ನವಿ ‘ಫಿಟ್‌ನೆಸ್‌ ಫ್ರೀಕ್‌’

7

ದಡಕ್‌ ಜಾಹ್ನವಿ ‘ಫಿಟ್‌ನೆಸ್‌ ಫ್ರೀಕ್‌’

Published:
Updated:

ಕಡೆದಿಟ್ಟಂತಹ ದೇಹಸಿರಿ, ಹಾಲಿನಲ್ಲಿ ಅದ್ದಿ ತೆಗೆದಂತಹ ಹೊಳೆಯುವ ಮೈಬಣ್ಣದ ಜೊತೆಗೆ ಅಮ್ಮನಿಂದ ನಟನಾ ಚಾಕಚಕ್ಯತೆಯನ್ನು ಸಿದ್ಧಿಸಿಕೊಂಡು ಸಿನಿಮಾ ರಂಗಕ್ಕೆ ಇಳಿದವರು ಜಾಹ್ನವಿ ಕಪೂರ್‌. ಮೊದಲ ಸಿನಿಮಾದಲ್ಲಿಯೇ ಶ್ರೀದೇವಿಗೆ ತಕ್ಕ ಮಗಳು ಎಂಬ ಬಿರುದು ಗಿಟ್ಟಿಸಿಕೊಂಡಿರುವ ಜಾಹ್ನವಿ, ಸೌಂದರ್ಯ ಕಾಪಿಟ್ಟುಕೊಳ್ಳಲು ವಿಶೇಷ ಕಾಳಜಿಯನ್ನೇ ವಹಿಸುತ್ತಾರೆ. 

ಮುಂಜಾವಿನಿಂದ ರಾತ್ರಿಯವರೆಗೂ ತಿಂಡಿ, ಊಟದ ಜೊತೆಗೆ ಶಿಸ್ತುಬದ್ಧ ಜೀವನ ಶೈಲಿ ರೂಢಿಸಿಕೊಂಡಿದ್ದಾರೆ. ಎಷ್ಟೇ ಬ್ಯುಸಿಯಾಗಿದ್ದರೂ, ಆರೋಗ್ಯದ ಕಾಳಜಿಯೊಂದಿಗೆ ರಾಜಿ ಮಾಡಿಕೊಳ್ಳದ ಸ್ವಭಾವ ಇವರದು. ಜಂಕ್‌ಫುಡ್‌ ಮತ್ತು ಸಕ್ಕರೆ ಸಕ್ಕರೆ ಬಳಸಿದ ಆಹಾರ, ಮದ್ಯ ಇವರಿಗೆ ವರ್ಜ್ಯ. ಹಣ್ಣು, ತರಕಾರಿಗಳಿಗೆ ಇವರ ಆಹಾರದಲ್ಲಿ ವಿಶೇಷ ಪ್ರಾಶಸ್ತ್ಯ.

ಬೆಳಿಗ್ಗೆ ಎದ್ದ ಕೂಡಲೇ ಎರಡು ಲೋಟ ನೀರು ಕುಡಿಯುವುದರೊಂದಿಗೆ ಜಾಹ್ನವಿ ದಿನಚರಿ ಪ್ರಾರಂಭವಾಗುತ್ತದೆ. ಸ್ವಲ್ಪ ಹೊತ್ತು ಯೋಗಕ್ಕೆ ಮೀಸಲು. ಬ್ರೌನ್‌ ಬ್ರೆಡ್‌, ಪೀನಟ್‌ ಬಟರ್‌, ಓಟ್ಸ್‌, ಮೊಟ್ಟೆಯ ಬಿಳಿ ಭಾಗ ಇವರ ಉಪಾಹಾರ.  

ಮಧ್ಯಾಹ್ನ ತರಕಾರಿ ಸಲಾಡ್‌, ಕೆಂಪು ಅನ್ನ, ಚಿಕನ್‌ ಸ್ಯಾಂಡ್‌ವಿಚ್‌ ಮತ್ತು ಹಣ್ಣುಗಳನ್ನು ತಿನ್ನುತ್ತಾರೆ. ರಾತ್ರಿ ಹೊತ್ತು ಲಘು ಆಹಾರ ಸೇವಿಸುವ ಇವರು, ತರಕಾರಿ ಸೂಪ್‌, ಸಲಾಡ್‌ ತಿಂದು ಹೊಟ್ಟೆ ತುಂಬಿಕೊಳ್ಳುತ್ತಾರೆ. 

ಜಾಹ್ನವಿಯನ್ನು ‘ಫಿಟ್‌ನೆಸ್‌ ಫ್ರೀಕ್‌’ ಎಂದೇ ಹೇಳಬಹುದು. ನಟನಾ ಅಂಗಳಕ್ಕೆ ಇಳಿಯುವ ಮೊದಲು ಇವರು ಹೆಚ್ಚಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದುದು ಜಿಮ್‌ ಬಾಗಿಲಿನಲ್ಲಿಯೇ. ಜಿಮ್‌ನಲ್ಲಿ ಕಾರ್ಡಿಯೊ ಮತ್ತು ವೇಟ್‌ ಲಿಫ್ಟಿಂಗ್‌ ಮಾಡುತ್ತಾರೆ. ದೇಹಸಿರಿ ಕಾಯ್ದುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ಜಾಗಿಂಗ್‌, ಈಜುವುದು, ಯೋಗ, ವಾಕಿಂಗ್‌ ಮಾಡುತ್ತಾರೆ. 

ಸೌಂದರ್ಯಕ್ಕಾಗಿ ಜಾಹ್ನವಿ ಹಲವು ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾರೆ ಎಂಬ ಊಹಾಪೋಹದ ನಡುವೆಯೂ, ಇವರು ಸೌಂದರ್ಯಕ್ಕೆ ಮನೆ ಬಳಕೆಯ ವಸ್ತುಗಳನ್ನು ಬಳಸಲು ಸಲಹೆ ನೀಡುತ್ತಾರೆ.

‘ರಾತ್ರಿ ಮಲಗುವಾಗ ನಿಮ್ಮ ಚರ್ಮಕ್ಕೆ ಹೊಂದುವಂತಹ ಮಾಯಿಶ್ಚರೈಸರ್‌ ಬಳಸಿ. ಕಡ್ಲೇಹಿಟ್ಟು, ಹಾಲು, ಬೆಣ್ಣೆಹಣ್ಣು ಮಿಶ್ರಣ ಮಾಡಿ ಫೇಸ್‌ಪ್ಯಾಕ್‌ ತಯಾರಿಸಿ ಹಚ್ಚಿಕೊಳ್ಳಿ. ಇದುವೇ ನನ್ನ ಸೌಂದರ್ಯ ಗುಟ್ಟು’ ಎನ್ನುತ್ತಾರೆ ಅವರು.

‘ಫಿಟ್‌ನೆಸ್‌ ಅಗತ್ಯವನ್ನು ಪ್ರತಿಯೊಬ್ಬರು ಕಂಡುಕೊಳ್ಳಬೇಕು. ವ್ಯಾಯಾಮ ಮಾಡುವುದರಿಂದ ದೇಹದ ಜೊತೆಗೆ ಮನಸು ಫಿಟ್‌ ಆಗಿರುತ್ತದೆ’ ಎಂಬ ನಿಲುವು ಇವರದು. 
**

ಹುಟ್ಟಿದ ದಿನಾಂಕ: 6 ಮಾರ್ಚ್‌ 1997 
ತೂಕ: 50 ಕೆ.ಜಿ 
ಎತ್ತರ: 5 ಅಡಿ 4 ಇಂಚು 
ಸುತ್ತಳತೆ: 33–25–33

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !