ಬುಧವಾರ, ಏಪ್ರಿಲ್ 14, 2021
24 °C

ದೂರವಾದ ಜೆನ್ನಿಫರ್‌–ರೊಡ್ರಿಗಸ್‌ ಜೋಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಾಸ್‌ ಏಜಂಲೀಸ್‌: ಖ್ಯಾತ ಪಾಪ್‌ ಕಲಾವಿದೆ, ನಟಿ ಜೆನ್ನಿಫರ್ ಲೋಪೆಜ್ ಮತ್ತು ಬೇಸ್‌ಬಾಲ್‌ ಆಟಗಾರ ಅಲೆಕ್ಸ್ ರೊಡ್ರಿಗಸ್ ಅವರು ನಿಶ್ಚಿತಾರ್ಥವಾದ ಎರಡು ವರ್ಷಗಳ ಬಳಿಕ ದೂರವಾಗಿದ್ದಾರೆ.

‘ಜೆನ್ನಿಫರ್ ಲೋಪೆಜ್ ಮತ್ತು ಅಲೆಕ್ಸ್ ರೊಡ್ರಿಗಸ್ ಅವರು ‘ಬ್ರೇಕ್‌ ಅಪ್‌’ ಮಾಡಿಕೊಂಡಿದ್ದಾರೆ. ‘ತಾರಾ ಜೋಡಿ’ ಜೊತೆಗಿಲ್ಲ’ ಎಂದು ಪೇಜ್‌ಸಿಕ್ಸ್‌ ವರದಿ ಮಾಡಿತ್ತು.

ಮಾರ್ಚ್‌ 19 ರಂದು ಜೆನ್ನಿಫರ್ ಲೋಪೆಜ್ ಮತ್ತು ಅಲೆಕ್ಸ್ ರೊಡ್ರಿಗಸ್ ಅವರ ನಿಶ್ಚಿತಾರ್ಥ ನಡೆದಿತ್ತು. ಕೋವಿಡ್‌ನಿಂದಾಗಿ ಈ ಜೋಡಿಯು ಎರಡು ಬಾರಿ ಮದುವೆಯನ್ನು ಮುಂದೂಡಿದ್ದರು.

ಸದ್ಯ ರೊಡ್ರಿಗಸ್‌ ಅವರು ಮಿಯಾಮಿಯಲ್ಲಿ ಬೇಸ್‌ಬಾಲ್‌ ಸ್ಪರ್ಧೆಗಾಗಿ ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಜೆನ್ನಿಫರ್‌ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ಧಾರೆ. 

ರೊಡ್ರಿಗಸ್ ಅವರು ಬೋಟ್‌ವೊಂದರಲ್ಲಿ ಇರುವ ಚಿತ್ರವನ್ನು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ‘ನಾನು ಬೋಟಿಂಗ್‌ ಮಾಡುತ್ತಿದ್ದೇನೆ. ನಿಮ್ಮ ವಿಕೇಂಡ್‌ ‍‍ಪ್ಲಾನ್‌ಗಳೇನು?’ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನೊಂದೆಡೆ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜೆನ್ನಿಫರ್‌, ‘ಇಂದು ನಗಲು ಉತ್ತಮ ಕಾರಣ ಸಿಕ್ಕಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು