ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿಯಲ್ಲಿ ‘ಕಾಗಝ್‌’, ‘ಮಾರಾ’

Last Updated 31 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಕಾಗಝ್‌

ಉತ್ತರಪ್ರದೇಶದ ಸಾಮಾನ್ಯ ರೈತನೊಬ್ಬನ ಜೀವನಾಧಾರಿತ ಸಿನಿಮಾ ‘ಕಾಗಝ್‌’ ಜನವರಿ 7ಕ್ಕೆ ಜೀ 5 ನಲ್ಲಿ ಬಿಡುಗಡೆಯಾಗಲಿದೆ. ಸತೀಶ್‌ ಕೌಶಿಕ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಸಲ್ಮಾನ್ ಖಾನ್ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಸಲ್ಮಾನ್ ಖಾನ್ ಹಾಗೂ ಸತೀಶ್‌ ಕೌಶಿಕ್ ನಿರ್ಮಾಣ ಮಾಡಿದ್ದಾರೆ. ಪಂಕಜ್‌ ತ್ರಿಪಾಠಿ ಹಾಗೂ ಮೋನಲ್ ಗಜ್ಜರ್‌ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಅಮರ್ ಉಪಾಧ್ಯಾಯ ಖಳನಾಯಕನಾಗಿ ನಟಿಸಿದ್ದಾರೆ.

ಉತ್ತರಪ್ರದೇಶದ ಸಣ್ಣ ಹಳ್ಳಿಯ ರೈತ ಲಾಲ್ ಬಿಹಾರಿ ಸತ್ತಿದ್ದಾನೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ, ಎಲ್ಲಾ ದಾಖಲೆಗಳಲ್ಲೂ ಅವನು ಸತ್ತಿದ್ದಾನೆ ಎಂಬ ಅಂಶವೇ ಇರುತ್ತದೆ. ಆದರೆ ಲಾಲ್‌ ಬಿಹಾರಿ ತಾನು ಸತ್ತಿಲ್ಲ, ಬದುಕಿದ್ದೇನೆ ಎಂಬುದನ್ನು ಸಾಬೀತು ಪಡಿಸಲು ಪಂಚಾಯತ್‌ ಸರಪಂಚ್‌, ನ್ಯಾಯಾಲಯದ ಮೊರೆ ಹೋಗುತ್ತಾನೆ. ಈ ವಿಷಯವು ಮಾಧ್ಯಮಗಳಲ್ಲಿ ಪ್ರಸಾರವಾಗಿ ದೇಶದ ಗಮನ ಸೆಳೆದಿತ್ತು. ರೈತ ಲಾಲ್ ಬಿಹಾರಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಟೀನಾ ಅಹುಜಾ, ಲಂಕೇಶ್ ಭಾರಧ್ವಾಜ್‌, ಸಂದೀಪ್ ಧರ್ ಮೊದಲಾದವರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಲಾಕ್‌ಡೌನ್‌ಗೂ ಮೊದಲು ಪೂರ್ಣಗೊಂಡಿತ್ತು, ಆದರೆ ಸಿನಿಮಾ ಬಿಡುಗಡೆ ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕೆ ಈಗ ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ ಚಿತ್ರತಂಡ.

ಮಾರಾ

ದಿಲೀಪ್‌ ಕುಮಾರ್ ನಿರ್ದೇಶನದ ‘ಮಾರಾ’ ತಮಿಳು ಚಿತ್ರ ಜನವರಿ 8ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಡಿಸೆಂಬರ್‌ 17ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಕೊನೇ ಕ್ಷಣದಲ್ಲಿ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿತ್ತು.

ಇದು ಮಲಯಾಳಂನಲ್ಲಿ 2015ರಲ್ಲಿ ಬಿಡುಗಡೆಯಾದ ಸೂಪರ್‌ಹಿಟ್ ‘ಚಾರ್ಲಿ’ ಚಿತ್ರದ ರಿಮೇಕ್ ಆಗಿದೆ. ಚಾರ್ಲಿ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಹಾಗೂ ಪಾರ್ವತಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಮಾರಾದಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್ ಹಾಗೂ ಆರ್‌. ಮಾಧವನ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ರೊಮ್ಯಾಂಟಿಕ್ ಪ್ರೇಮಕಥೆ ಹೊಂದಿರುವ ಈ ಚಿತ್ರಕ್ಕೆ ಪ್ರಮೋದ್ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಪ್ರತೀಕ್ ಚಕ್ರವರ್ತಿ ಹಾಗೂ ಶೃತಿ ನಲ್ಲಪ್ಪ ಹಣ ಹೂಡಿಕೆ ಮಾಡಿದ್ದಾರೆ. ಘಿಬ್ರನ್‌ ಸಂಗೀತ ಸಂಯೋಜಿಸಿದ್ದಾರೆ. ಎಸ್‌.ಶಿವದಾ, ಮೌಲಿ, ಅಲೆಕ್ಸಾಂಡರ್ ಬಾಬು, ಮಿನನ್‌ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT