ಶನಿವಾರ, ಮೇ 28, 2022
21 °C

ಹೊಸ ವರ್ಷಾಚರಣೆ: ಮಾಲ್ಡೀವ್ಸ್‌ಗೆ ಜತೆಯಾಗಿ ತೆರಳಿದ ಕಿಯಾರ– ಸಿದ್ಧಾರ್ಥ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Kiara Advani-Siddharth Instagram Post

ಬೆಂಗಳೂರು: ಕಾರ್ಗಿಲ್ ವೀರಯೋಧನ ಕಥೆ ಹೊಂದಿರುವ ‘ಶೇರ್‌ಶಾ‘ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರ ಅಡ್ವಾಣಿ ಜೋಡಿ ಮತ್ತೆ ಸುದ್ದಿ ಮಾಡಿದೆ.

ಈ ಜೋಡಿ, ವರ್ಷಾಂತ್ಯದ ಆಚರಣೆಗೆ ಮಾಲ್ಡೀವ್ಸ್‌ಗೆ ತೆರಳಿದ್ದು, ವಿಮಾನ ನಿಲ್ದಾಣದಲ್ಲಿ ಪರಸ್ಪರ ಕೈ ಹಿಡಿದುಕೊಂಡು ಸಾಗುತ್ತಿರುವ ಫೋಟೊ ಮತ್ತು ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಶೇರ್‌ಶಾ ಚಿತ್ರದ ಪ್ರಚಾರ ಸಂದರ್ಭದಲ್ಲಿ ಈ ಜೋಡಿ ಜತೆಯಾಗಿ ಕಾಣಿಸಿಕೊಂಡ ಬಳಿಕ ಹಲವು ಬಾರಿ ಕ್ಯಾಮೆರಾ ಕಣ್ಣಿಗೆ ಸಿಲುಕಿದ್ದರು.

ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗೆ ಪೂರಕವಾಗಿ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರುವುದು ಕೂಡ ಬಿಟೌನ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು