ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖ್ವಾಜಾ’ ವಿಡಿಯೊ ಮಸ್ತ್ ಮಜಾ: ಯೂಟ್ಯೂಬ್‌ ಮೂಲಕ ಜನರನ್ನು ರಂಜಿಸುತ್ತಿರುವ ಕಲಾವಿದ

ಸಾಮಾಜಿಕ ಜಾಲತಾಣ ಬಳಸಿಕೊಂಡು ಜನರನ್ನು ರಂಜಿಸುತ್ತಿರುವ ಕಲಾವಿದ
Last Updated 22 ಮೇ 2022, 2:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮುಕಳೆಪ್ಪ ಕಾಮಿಡಿ’ ಎಂದು ಯೂಟ್ಯೂಬ್‌ನಲ್ಲಿ ಹುಡುಕಿದರೆ ಹಲವಾರು ವಿಡಿಯೊಗಳು ಸಿಗುತ್ತವೆ. ವಿಭಿನ್ನ ಕಥಾಹಂದರ ಹೊಂದಿರುವ ಈ ವಿಡಿಯೊಗಳನ್ನು ನೋಡಿದರೆ ಹೊಟ್ಟೆ ಹುಣ್ಣಾಗುವಷ್ಟು ನಗದೇ ಇರಲಾರಿರಿ.

ಹೌದು, ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತ ಜನರನ್ನು ರಂಜಿಸಿ, ಪ್ರಖ್ಯಾತಿ ಗಳಿಸಿದವರು ಹಲವರು. ಅಂತಹವರಲ್ಲಿ ಧಾರವಾಡದ ಹೆಬ್ಬಳ್ಳಿ ಫಾರಂನ ಕಂಪ್ಲಿ ಬಸವೇಶ್ವರ ನಗರದ ಖ್ವಾಜಾ ಎನ್‌. ಶಿರಹಟ್ಟಿ ಸಹ ಒಬ್ಬರು.

ಇಲ್ಲಿನ ಚಿತ್ರ ಕಲಾವಿದ ಮೊಹಮ್ಮದ್ ಹನೀಫ್ ಹಾಗೂ ಸಮ್ರಿನ್ ಬಾನು ಅವರ ಐವರು ಮಕ್ಕಳಲ್ಲಿ ನಾಲ್ಕನೆಯವರು ಖ್ವಾಜಾ. ಪ್ರಥಮ ಪಿಯುಸಿ ಪೂರ್ಣಗೊಳಿಸಿದ್ದಾರೆ. ಟಿಕ್‌ಟಾಕ್‌ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಅಣ್ಣ ಅಮ್ಜದ್‌ ಅಲಿ ಅವರೊಂದಿಗೆ ವಿಡಿಯೊಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಟಿಕ್‌ಟಾಕ್‌ಗೆ ನಿರ್ಬಂಧ ಹೇರಿದಾಗ ಹಾಸ್ಯಭರಿತ ವಿಡಿಯೊಗಳನ್ನು ಯೂಟ್ಯೂಬ್, ಫೇಸ್‌ಬುಕ್‌ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಹೆಚ್ಚು ಜನಪ್ರಿಯತೆ ಗಳಿಸಿದರು.

ಯೂಟ್ಯೂಬ್‌ನಲ್ಲಿ 200ಕ್ಕೂ ಹೆಚ್ಚು ವಿಡಿಯೊಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. 7.40 ಲಕ್ಷ ಮಂದಿ ಸಬ್‌ಸ್ಕ್ರೈಬ್‌ ಆಗಿದ್ದಾರೆ. ಹಲವು ವಿಡಿಯೊಗಳು ಮಿಲಿಯನ್‌ಗಟ್ಟಲೆ ವಿವ್ಸ್‌ ಪಡೆದಿವೆ. ಉತ್ತರ ಕರ್ನಾಟಕದ ಸೊಗಸಾದ ಭಾಷೆಯಲ್ಲಿ ನಿತ್ಯದ ಬದುಕಿನ ಘಟನೆಗಳನ್ನೇ ಕಥೆಗಳಾಗಿಸಿಕೊಂಡು ಜನರನ್ನು ರಂಜಿಸುತ್ತಿದ್ದಾರೆ.

‘ಹೆಚ್ಚು ಸಿನಿಮಾಗಳನ್ನು ನೋಡುತ್ತಿದ್ದೆ, ಇದೇ ನಟನೆಗೆ ಪ್ರೇರಣೆಯಾಯಿತು. ಅಣ್ಣ ಅಮ್ಜದ್‌ ಅವರು ಕಥೆ ಬರೆದು, ಚಿತ್ರೀಕರಿಸಿ, ಎಡಿಟಿಂಗ್ ಸಹ ಮಾಡುತ್ತಾರೆ. ಸ್ನೇಹಿತರು ‘ಮುಕಳೆಪ್ಪ’ ಎಂದು ಬೈಯುತ್ತಿದ್ದರಿಂದ ಅದನ್ನೇ ವಿಡಿಯೊಗಳಲ್ಲಿ ಬಳಸಿದೆವು. ಜನರಿಗೂ ಅದೇ ಇಷ್ಟವಾಯಿತು. ವಾರಕ್ಕೆರಡು ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದೇವೆ’ ಎನ್ನುತ್ತಾರೆ ಖ್ವಾಜಾ.

‘ಸದ್ಯ ಬರೆಗೆಟ್ಟೋನು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಬೇರೆ ಸಿನಿಮಾಗಳಲ್ಲಿ ನಟನೆಯ ಅವಕಾಶಗಳು ಬರುತ್ತಿವೆ. ಸಿನಿಮಾದಲ್ಲೇ ಹೆಸರು ಮಾಡುವ ಆಸೆಯಿದೆ. ವಿಡಿಯೊಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಸ್ನೇಹಿತರಾದ ರಿಹಾನ್, ಶಕೀರ್‌, ಕುಟುಂಬದವರು ಹಾಗೂ ಗ್ರಾಮಸ್ಥರ ನೆರವನ್ನು ಎಂದೂ ಮರೆಯಲಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT