ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇರಿ ಪುಕಾರ್‌ ಸುನೋ: ಒಂದು ಭರವಸೆಯ ಗೀತೆ

ಒಂದು ಭರವಸೆಯ ಗೀತೆ
Last Updated 26 ಜೂನ್ 2021, 19:45 IST
ಅಕ್ಷರ ಗಾತ್ರ

ಸಂಕಷ್ಟದ ನಿವಾರಣೆಗೊಂದು ಪ್ರಾರ್ಥನಾ ರೂಪದ ಗೀತೆಯೊಂದು ಬಂದಿದೆ. ‘ಮೇರಿ ಪುಕಾರ್‌ ಸುನೋ’ ಹೆಸರಿನಲ್ಲಿ ಸೋನಿ ಮ್ಯೂಸಿಕ್‌ ಇಂಡಿಯಾ ಹೊಸ ಆಲ್ಬಂನ್ನು ಬಿಡುಗಡೆ ಮಾಡಿದೆ.

ಸಂಗೀತ ದಿಗ್ಗಜ ಎ.ಆರ್‌. ರೆಹಮಾನ್‌ ಮತ್ತು ಗುಲ್ಜಾರ್‌ ಅವರ ಕಾಂಬಿನೇಷನ್‌ನಲ್ಲಿ ಈ ಹಾಡು ಮೂಡಿಬಂದಿದೆ. ಇದು ಸಂಕಷ್ಟದ ಶಮನ, ಮುಂದಿನ ಭರವಸೆ ಮೂಡಿಸುವ ಪ್ರಯತ್ನ ಎಂದು ಸೋನಿ ಮ್ಯೂಸಿಕ್‌ ಮತ್ತು ಸಂಗೀತ ತಂಡ ಹೇಳಿದೆ.

ಈ ಗೀತೆಯಲ್ಲಿ ಅಲ್ಕಾ ಯಾಗ್ನಿಕ್‌, ಶ್ರೇಯಾ ಘೋಷಾಲ್‌, ಕೆ.ಎಸ್.ಚಿತ್ರಾ, ಸಾಧನಾ ಸರ್‌ಗಮ್‌, ಶಶಾ ತಿರುಪತಿ, ಅರ್ಮಾನ್ ಮಲಿಕ್‌ ಮತ್ತು ಆಸೀಸ್‌ ಕೌರ್‌ ಕಾಣಿಸಿಕೊಂಡಿದ್ದಾರೆ.

ಈ ಹಾಡು ದಿಲ್‌ ಸೇ, ಗುರು, ಸ್ಲಮ್‌ಡಾಗ್‌ ಮಿಲಿಯನೇರ್, ಸಾಥಿಯಾ ಮತ್ತು ಓಕೆ ಜಾನು ರೀತಿಯಲ್ಲೇ ಸದಾ ಗುನುಗುವಂತಾಗುವ ಮಾದರಿಯಲ್ಲಿ ಮೂಡಿಬಂದಿದೆ. ಈ ಗೀತೆಯು ಭೂತಾಯಿಯ ಕರೆ. ಭೂತಾಯಿಯ ಎಲ್ಲ ಮಕ್ಕಳೂ ಒಟ್ಟಾಗಿ ಎಂಬ ಕರೆ ನೀಡುತ್ತದೆ. ಅಲ್ಲದೆ, ಈ ಸಂಕಷ್ಟದ ಸಮಯ ನಿವಾರಣೆಯಾಗುತ್ತದೆ ಎಂಬ ಭರವಸೆಯನ್ನೂ ನೀಡುತ್ತದೆ. ಒಮ್ಮತದ ಭಾವವನ್ನು ನಮ್ಮೊಳಗೆ ಇದು ಮರುರೂಪಿಸುತ್ತದೆ. ನಮ್ಮೊಳಗೆ ಇರುವ ನಂಬಿಕೆಯ ಮೇಲೆ ವಿಶ್ವಾಸ ಇಡುವುದಕ್ಕಾಗಿ ಪ್ರೋತ್ಸಾಹ ನೀಡುವ ಈ ಹಾಡು, ಈ ಸಂಕಷ್ಟದ ಸಮಯವು ಎಷ್ಟು ಪ್ರಖರ ಮತ್ತು ಖುಷಿಯ ಭವಿಷ್ಯದ ಸೂಚಕವಾಗಿದೆ ಎಂಬುದನ್ನು ಎತ್ತಿ ಹೇಳುತ್ತದೆ ಎಂದು ತಂಡ ಹೇಳಿದೆ.

ಹಾಡಿನ ನಿರ್ದೇಶನ ಮತ್ತು ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡಿದ ಸಂಗೀತಗಾರ ಎ.ಆರ್‌.ರೆಹಮಾನ್‌, ‘ಈ ಸಾಂಕ್ರಾಮಿಕ ರೋಗದ ಸಮಯವು, ಎಲ್ಲರ ಜೀವನದಲ್ಲಿ ಅತ್ಯಂತ ಸಂಕಷ್ಟದ ಸಮಯ. ಎಲ್ಲೆಡೆ ಅನಿಶ್ಚಿತತೆ ಮತ್ತು ನೋವು ಇದೆ. ಆದರೂ, ತುಂಬಾ ಸಹಿಷ್ಣುತೆ ಮತ್ತು ಶಮನವೂ ಇದೆ. ಭರವಸೆಯ ಹಾಡೊಂದನ್ನು ರೂಪಿಸಲು ಗುಲ್ಝಾರ್ ಮತ್ತು ನಾನು ಬಯಸಿದ್ದೇವೆ. ಯಾಕೆಂದರೆ, ನಮಗೆಲ್ಲರಿಗೂ ಅನುಕೂಲ ಮತ್ತು ಭರವಸೆ ಅಗತ್ಯವಿದೆ. ಮೇರಿ ಪುಕಾರ್‌ ಸುನೋ ಎಂಬುದು ತನ್ನ ಮಕ್ಕಳ ಮೂಲಕ ಮಕ್ಕಳಿಗೆ ಹಾಡುವಂಥ ಹಾಡಾಗಿದೆ. ಮನುಷ್ಯರು ಹಲವು ಕಾಲಗಳನ್ನು ದಾಟಿಯೂ ಬದುಕುಳಿದಿದ್ದಾರೆ ಮತ್ತು ಈ ಸಂಕಷ್ಟವನ್ನೂ ಅವರು ಎದುರಿಸಿ ನಿಲ್ಲಲಿದ್ದಾರೆ ಎಂಬುದನ್ನು ಇದು ಹೇಳುತ್ತದೆ’ ಎಂದಿದ್ದಾರೆ.

ಗೀತೆಯ ಆಶಯದ ಬಗ್ಗೆ ಮಾತನಾಡಿದ ಗುಲ್ಝಾರ್‌, ‘ಇದು ಭೂತಾಯಿಯ ಕಥೆ. ತನ್ನ ಮಾತು ಕೇಳಿ ಎಂದು ಆಕೆ ನಮಗೆ ಮನವಿ ಮಾಡಿಕೊಳ್ಳುತ್ತಾಳೆ. ಅಪಾರ ಸಂಪತ್ತು, ತಂಗಾಳಿ, ಹರಿವ ನದಿಗಳು ಮತ್ತು ಅನವರತ ಬೆಳಕಿನಿಂದ ಆಕೆ ನಮಗೆ ಭರವಸೆಯನ್ನು ನೀಡುತ್ತಾಳೆ. ನಮಗೆ ಜೀವನ ಎಂಬ ಉಡುಗೊರೆಯನ್ನು ಕಾಯ್ದುಕೊಳ್ಳುವ ಭರವಸೆಯನ್ನೂ ನಮಗೆ ಇದು ನೀಡುತ್ತದೆ. ರಹಮಾನ್‌ ನನ್ನ ಶಬ್ದಗಳಿಗೆ ನಿಜಕ್ಕೂ ಅದ್ಭುತ ಸಂಯೋಜನೆಯನ್ನು ಮಾಡಿದ್ದಾರೆ’ ಎಂದಿದ್ದಾರೆ.

ಸೋನಿ ಮ್ಯೂಸಿಕ್ ಇಂಡಿಯಾದ ಭಾರತೀಯ ವ್ಯವಸ್ಥಾಪಕ ನಿರ್ದೇಶಕ ರಜತ್ ಕಕ್ಕರ್‌, ಹೇಳುವಂತೆ ‘ಸೋನಿ ಮ್ಯೂಸಿಕ್ ಇಂಡಿಯಾ ನಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಗೀತ ಮತ್ತು ಸ್ಫೂರ್ತಿದಾಯಕ ಶಬ್ದಗಳ ಮೂಲಕ ಶ್ರೋತೃಗಳ ಮನದುಂಬಿಸಲು ಬಯಸುತ್ತದೆ. ಎ.ಆರ್‌.ರೆಹಮಾನ್ ಮತ್ತು ಗುಲ್ಝಾರ್ ಸಾಹಬ್‌ರಂತಹ ದೈತ್ಯರು ರಚಿಸಿ ಸಂಗೀತ ಸಂಯೋಜಿಸಿದ ಮೇರಿ ಪುಕಾರ್‌ ಸುನೋ, ಸ್ಫೂರ್ತಿದಾಯಕ ಹಾಡಾಗಿದೆ’ ಎಂದಿದ್ದಾರೆ.

ಈ ಹಾಡಿನ 50% ಗಳಿಕೆಯನ್ನು, ದೇಶದ ಪ್ರಮುಖ ದತ್ತಿ ಸಂಸ್ಥೆಗಳ ನೆರವಿನಲ್ಲಿ ದೇಶದ ಕೋವಿಡ್ ಪರಿಹಾರಕ್ಕೆ ಮೀಸಲಿಡಲಿದೆ.
ಹಾಡು ಈಗಾಗಲೇ ಎಲ್ಲ ಮಾಧ್ಯಮಗಳಲ್ಲೂ ಲಭ್ಯವಿದೆ. ಹಾಡಿನ ಲಿಂಕ್‌ - https://SMI.lnk.to/MeriPukaarSuno

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT