ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ಫೋಟೊ ಹಂಚಿಕೊಂಡ ’ಮನಿ ಹೈಸ್ಟ್‌’ ನಟಿ ಇಸ್ತರ್‌: ನೆಟ್ಟಿಗರಿಂದ ಮೆಚ್ಚುಗೆ

Last Updated 6 ಜನವರಿ 2022, 6:51 IST
ಅಕ್ಷರ ಗಾತ್ರ

ಭಾರತದಲ್ಲಿಪ್ರಸಾರವಾಗುತ್ತಿರುವ ’ಮನಿ ಹೈಸ್ಟ್‌’ ಸರಣಿಯ ನಟಿ ’ಇಸ್ತರ್‌ ಎಸ್ಟೊ’ ಮನೆಯಲ್ಲಿ ಗಣೇಶ ಫೋಟೊ ಇರುವುದು ಈಗ ಚರ್ಚಿತ ವಿಷಯವಾಗಿದೆ.

ಸ್ಪಾನಿಷ್‌ ಮೂಲದ ಈ ನಟಿಯ ಮನೆಯಲ್ಲಿ ಏಕದಂತನ ಫೋಟೊ ಇರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಅಥವಾ ಹಿಂದೂ ಧರ್ಮ ಕುರಿತಂತೆ ಯಾವುದೇ ಸಂಬಂಧವನ್ನು ಹೊಂದಿರದ ಈ ನಟಿ, ಮನೆಯಲ್ಲಿ ಗಣೇಶನ ಫೋಟೊ ಹಾಕಿಕೊಂಡಿರುವುದು ಹೆಮ್ಮೆ ಎನಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕಾಮೆಂಟ್‌ ಮಾಡುತ್ತಿದ್ದಾರೆ.

ಸ್ಪಾನಿಷ್‌ ಮೂಲದ ’ಮನಿ ಹೈಸ್ಟ್‌ ಸರಣಿ ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದ್ದು ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಜನಪ್ರಿಯತೆ ಪಡೆದಿದೆ. ಇದರಲ್ಲಿ ಅವರು ಸ್ಟಾಕ್‌ಹೋಮ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮನೆಯಲ್ಲಿ ಗಣೇಶನ ಮುಂದೆ ನಿಂತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇಸ್ತರ್‌ ಅವರು ಗಣೇಶನ ಮುಂದೆ ನಿಂತಿರುವ ವಿಡಿಯೊಗಳನ್ನುಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದಾರೆ. ಮನಿ ಹೈಸ್ಟ್‌ ಸರಣಿಯ ಪಾತ್ರಕ್ಕಿಂತಲೂ ಅವರು ಗಣೇಶನ ಫೋಟೊದ ಮೂಲಕ ಹೆಚ್ಚು ಸುದ್ದಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT