ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಪ್ ಶೋಗಳ ಸಮಗ್ರ ವರದಿ: ಹೊಸ ಪ್ರಯತ್ನಕ್ಕೆ ಮುಂದಾದ ನೆಟ್‌ಫ್ಲಿಕ್ಸ್‌

Last Updated 17 ನವೆಂಬರ್ 2021, 13:33 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ಓಟಿಟಿ ವೇದಿಕೆಯಾಗಿರುವ ನೆಟ್‌ಫ್ಲಿಕ್ಸ್‌ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಇನ್ಮುಂದೆ ತನ್ನ ವೇದಿಕೆಯಲ್ಲಿ ವೀಕ್ಷಿಸಲ್ಪಡುವ ಟಾಪ್ಕಾರ್ಯಕ್ರಮಗಳ ವರದಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ಇಡಲು ಹೊಸ ವೆಬ್‌ಸೈಟ್ ಒಂದನ್ನು ಪ್ರಾರಂಭಿಸಲು ನೆಟ್‌ಫ್ಲಿಕ್ಸ್‌ ಅಣಿಯಾಗಿದೆ.

ಈ ಮೂಲಕ ನೆಟ್‌ಫ್ಲಿಕ್ಸ್ ತನ್ನ ಪ್ರತಿ ವಿಭಾಗದಲ್ಲಿ ಪ್ರತಿ ವಾರದ ಟಾಪ್ 10 ಕಾರ್ಯಕ್ರಮಗಳ ಪಟ್ಟಿಯನ್ನು ಜನರ ಎದುರು ತೆರದಿಡಲಿದೆ ಎಂದು ಕಂಪನಿ ತಿಳಿಸಿದೆ.

ಪ್ರತಿ ಸೋಮವಾರದಿಂದ ಭಾನುವಾರದವರೆಗಿನ ವರದಿ ಇದಾಗಲಿದ್ದು, ಇದನ್ನು ಪ್ರತಿ ಮಂಗಳವಾರ ಬಿಡುಗಡೆಗೊಳಿಸಲಾಗುತ್ತದೆ. ಸಿನಿಮಾ (ಇಂಗ್ಲಿಷ್), ಸಿನಿಮಾ (ನಾನ್ ಇಂಗ್ಲಿಷ್) ಟಿವಿ (ಇಂಗ್ಲಿಷ್) ಟಿವಿ (ನಾನ್ ಇಂಗ್ಲಿಷ್) ಎಂಬ ವಿಭಾಗವಾರು ಅಂಕಿ–ಅಂಶಗಳು ದೊರಕಲಿವೆ. ಜೊತೆಗೆ 90 ದೇಶಗಳಿಗೆ ರಾಂಕಿಂಗ್ ಪಟ್ಟಿ ನೀಡಲಾವುದು ಎಂದು ಕಂಪನಿ ತಿಳಿಸಿದೆ.

ಇದು ಗಂಟೆಯ ಕಾಲಾವಧಿಯ ವರದಿಯನ್ನು ಒಳಗೊಂಡಿದ್ದು, ಇದರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಏನನ್ನು ನೋಡಬೇಕು ಎಂಬುದು ವೀಕ್ಷಕರಿಗೆ ಅನುಕೂಲ ಆಗುತ್ತದೆ ಎಂಬ ದಿಶೆಯಲ್ಲಿ ವೆಬ್‌ಸೈಟ್ ರಚಿಸಲಾಗುತ್ತಿದೆ ಎಂದು ನೆಟ್‌ಫ್ಲಿಕ್ಸ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT