ಸೋಮವಾರ, ಮೇ 16, 2022
22 °C

‘ನಿನ್ನ ನೆನಪು’ ಅಲ್ಬಂ ಹಾಡು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಿಎಸ್‌ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ‘ನಿನ್ನ ನೆನಪು’ ಎಂಬ ಅಲ್ಬಂ ಹಾಡು ಬಿಡುಗಡೆ ಆಗಿದೆ. ಜಿ.ಕೆ. ಶಿವಾನಂದ್ ಈ ಹಾಡಿಗೆ ನಿರ್ದೇಶನ ಮಾಡಿದ್ದು ಸನ್ಮಿತ್ ವಿಹಾನ್ ಹಾಗೂ  ಜನನಿ ನಟಿಸಿದ್ದಾರೆ. ರಂಗನಾಥ್ ವರುಣ್ ಹಾಡಿಗೆ ಛಾಯಾಗ್ರಹಣ ಮಾಡಿದ್ದು ಸುರಕ್ಷಿತಾ ಶೆಟ್ಟಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ದೇವ್‌ನಾಯ್ಡು ಹಾಗೂ ಸುನೀಲ್ ಕುಂಬಾರ್ ನಿರ್ಮಾಣದ ಈ ಹಾಡಿಗೆ ಅರ್ಬನ್ ಫ್ರೇಮ್‌ ಪ್ರೊಡಕ್ಷನ್ ಸಂಕಲನ ಚಿತ್ರಕ್ಕಿದೆ.

ಸನ್ಮಿತ್‌ ಈಗಾಗಲೇ ಮಲೆನಾಡಿನ ಹೂವು ನೀ, ನೀಲಿ ನೀಲಿ ಆಕಾಶ, ಮೋಸಗಾತಿಯೇ, ಒಂಟಿಯಾನ ಹಾಗೂ ದೇವ ನೀನು ಹಾಡಿನ ಮೂಲಕ ಕರ್ನಾಟಕಕ್ಕೆ ಚಿರಪರಿಚಿತರಾಗಿದ್ದಾರೆ.

ನಿನ್ನ ನೆನಪು ಹಾಡಿಗೆ ಚಂದನವನದ ಖ್ಯಾತನಟರಾದ ವಿನೋದ್ ಪ್ರಭಾಕರ್‌, ನೆನಪಿರಲಿ ಪ್ರೇಮ್‌, ಸಿಂಪಲ್ ಸುನಿ, ತಬಲಾ ನಾಣಿ, ಅಮೆರಿಕ ಅಮೆರಿಕ ಚಿತ್ರದ ಹೇಮಾ ಪ್ರಭಾತ್ ಹಾಗೂ ಅನಿತಾ ಭಟ್‌ ಮೊದಲಾದವರು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು