ಶುಕ್ರವಾರ, ಏಪ್ರಿಲ್ 10, 2020
19 °C

ನೂರು ರೈತರು, ನೂರು ಕಥೆಗಳುಫೋಟೊ, ವಿಡಿಯೊ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಫೆ ಟ್ರ್ಯಾಕ್ಟರ್‌ ಮತ್ತು ಫಾರ್ಮ್‌ ಎಕ್ವಿಪ್‌ಮೆಂಟ್ ಲಿಮಿಟೆಡ್‌, ತನ್ನ ’ಬಿ ಎ ಫಾರ್ಮರ್‌ ದೋಸ್ತ್‌’ (TAFE- Be a #Farm Dost) ಎಂಬ ಯೋಜನೆಯ ಭಾಗವಾಗಿ ‘ನೂರು ರೈತರು, ನೂರು ಕಥೆಗಳು..’ ಶೀರ್ಷಿಕೆ ಅಡಿ ರಾಷ್ಟ್ರವ್ಯಾಪಿ ಫೋಟೊ ಮತ್ತು ವಿಡಿಯೊ ಸ್ಪರ್ಧೆ ಆಯೋಜಿಸಿದೆ. ಇದನ್ನು ಕೃಷಿ ಸಮುದಾಯಕ್ಕೆ ಸಮರ್ಪಿಸಲಾಗಿದೆ.

ದೇಶದಾದ್ಯಂತ ತೆರೆಮರೆಯಲ್ಲಿರುವ ಸಮಾಜಕ್ಕೆ ಕೊಡುಗೆ ನೀಡಿರುವಂತಹ ನೂರು‌ ರೈತರ ಸ್ಫೂರ್ತಿದಾಯಕ ಯಶೋಗಾಥೆಗಳನ್ನು ಸಂಗ್ರಹಿಸುವುದು ಈ ಸ್ಪರ್ಧೆಯ ಉದ್ದೇಶ. ಈ ಸ್ಪರ್ಧೆಯಲ್ಲಿ ’ಫೋಟೊ ಸ್ಟೋರೀಸ್ ಮತ್ತು ವಿಡಿಯೊ ಸ್ಟೋರೀಸ್’ ಎಂಬ ಎರಡು ವಿಭಾಗಗಳಿವೆ. ವಿಜೇತರಿಗೆ ₹2.20 ಲಕ್ಷ ನಗದು ಮತ್ತು ಪ್ರಶಸ್ತಿ ದೊರೆಯಲಿದೆ.

ಭಾರತದಾದ್ಯಂತ ಯಾವುದೇ ಪ್ರದೇಶದಲ್ಲಿರುವ 13 ವರ್ಷ ಮೇಲ್ಪಟ್ಟ ಎಲ್ಲರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಆನ್‌ಲೈನ್ ಮೂಲಕ ತಮ್ಮ ಹೆಸರು ನೋಂದಾಯಿಸಬಹುದು. ಈ ಸ್ಪರ್ಧೆ ಪ್ರವೇಶಕ್ಕೆ ಶುಲ್ಕವಿಲ್ಲ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ರೈತರನ್ನು ಭೇಟಿಯಾಗಿ, ಅವರಿಂದ ಸ್ಫೂರ್ತಿದಾಯಕ ಮಾಹಿತಿಯನ್ನು ಪಡೆದು, ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ನೇರವಾಗಿ ಫಾರ್ಮರ್ ದೋಸ್ತ್ ವೆಬ್ ಸೈಟ್‌ಗೆ ಹೋಗಿ (farmdost.com/100Farmers100Stories) ತಮ್ಮ ಫೋಟೊ ಸ್ಟೋರಿ ಅಥವಾ ವಿಡಿಯೊ ಸ್ಟೋರಿಯನ್ನು ಅಪ್‌ಲೋಡ್‌ ಮಾಡಬಹುದು. ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಲು ಕೊನೆಯ ದಿನ ಫೆಬ್ರವರಿ 29, 2020. 

ಈ ಸ್ಪರ್ಧೆಗೆ ತೀರ್ಪುಗಾರರಾಗಿ ಹಿರಿಯ ನಾಯಕರು ಮತ್ತು ತಜ್ಞರು ಪಾಲ್ಗೊಳ್ಳಲಿದ್ದಾರೆ. ಇವರ ಜತೆಗೆ ಟಾಫೆಯ ಕಾರ್ಪೊರೇಟ್‌ ರಿಲೇಶನ್ ಮತ್ತು ಅಲಯನ್ಸ್ ಅಧ್ಯಕ್ಷ ಟಿ.ಆರ್.ಕೇಶವನ್‌ ತೀರ್ಪುಗಾರರ ವಿಶೇಷ ಸಲಹೆಗಾರರಾಗಿ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಟಾಫೆ ಕಾರ್ಪೊರೇಟ್ ಕಮ್ಯುನಿಕೇಷನ್ ಹೆಡ್ ಸುನಿತಾ ಸುಬ್ರಮಣಿಯನ್, ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತ ರೈತ ರಾಮ್ ಶರಣ್ ವರ್ಮಾ, ಹಿರಿಯ ಪತ್ರಕರ್ತ ಬಿ.ಎನ್.ಕುಮಾರ್, ಸ್ಟ್ರಾಟಜಿಕ್ ಹಾಗೂ ಬ್ರಾಂಡ್ ಕನ್ಸಲ್ಟೆಂಟ್ ಹರಿ ಗಣೇಶ್ ದೇಶಿಕನ್, ಕ್ರಿಯೇಟಿವ್ ಡೈರೆಕ್ಟರ್ ಆನಂದ ರೇ, ರಿಡಿಫ್ಯೂಶನ್ ಮತ್ತು ಛಾಯಾಗ್ರಾಹಕ ಹಾಗೂ ಸಾಮಾಜಿಕ ಮಾಧ್ಯಮದ ಪ್ರಭಾವಿ ವ್ಯಕ್ತಿ ಫೈಜಾನ್ ಪಟೇಲ್ ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದಾರೆ.

ಟಾಫೆ ಕಂಪನಿ ಕಳೆದ ನಾಲ್ಕು ವರ್ಷಗಳಿಂದ ನೂರು ಯಶಸ್ವಿ ರೈತರನ್ನು ಗುರುತಿಸುವ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಇದು ನಾಲ್ಕನೇ ವರ್ಷದ ಸ್ಪರ್ಧೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)