ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಬಿ ಬಂಪ್ ಫೋಟೊ ಹಂಚಿಕೊಂಡ ಪಾಪ್ ತಾರೆ ರಿಹಾನ

Last Updated 3 ಫೆಬ್ರುವರಿ 2022, 6:57 IST
ಅಕ್ಷರ ಗಾತ್ರ

ಬೆಂಗಳೂರು: ಪಾಪ್ ತಾರೆ ಮತ್ತು ಫ್ಯಾಷನ್ ಮಾಡೆಲ್ ರಿಹಾನ ಗರ್ಭಿಣಿಯಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಬೇಬಿ ಬಂಪ್ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಗೆಳೆಯ, ರಾಪರ್ ಅಸಪ್ ರಾಕಿ ಜತೆ ರಿಹಾನ ಮಗುವಿನ ನಿರೀಕ್ಷೆಯಲ್ಲಿದ್ದು, ಇಬ್ಬರೂ ನ್ಯೂಯಾರ್ಕ್ ನಗರದಲ್ಲಿ ಜತೆಯಾಗಿ ಇರುವ ಫೋಟೊಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ರಿಹಾನ ಅವರು ಪಾಪ್ ಸಿಂಗರ್ ಮಾತ್ರವಲ್ಲದೆ, ಫ್ಯಾಷನ್ ಲೋಕದಲ್ಲೂ ಹೆಸರು ಗಳಿಸಿದ್ದಾರೆ.

ರಿಹಾನ ಜತೆಗಿನ ಸಂಬಂಧ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದ ರಾಪರ್ ರಾಕಿ, ‘ಆಕೆ ನನ್ನ ಜೀವನದ ಪ್ರೀತಿ‘ ಎಂದಿದ್ದರು.

ನವೆಂಬರ್ 2020ರಿಂದ ರಿಹಾನ ಜತೆ ರಾಕಿ ಡೇಟಿಂಗ್ ಮಾಡುತ್ತಿದ್ದರು. ಅದಕ್ಕೂ ಮೊದಲು ಇಬ್ಬರೂ ಗೆಳೆಯರಾಗಿದ್ದರು.

ರಿಹಾನಾ, ದೇಶದಲ್ಲಿ ರೈತರ ಪ್ರತಿಭಟನೆ ವೇಳೆ ಚರ್ಚೆಗೆ ಬಂದ ಟೂಲ್‌ಕಿಟ್‌ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದರು.

ರಿಹಾನ ಜತೆ ರಾಕಿ ಕೂಡ ಮಗುವಿನ ಬರುವಿಕೆಗೆ ಕಾಯುತ್ತಿದ್ದು, ಕುಟುಂಬವೊಂದನ್ನು ಆರಂಭಿಸುವ ಕುರಿತು ನಾನು ಮತ್ತಷ್ಟು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT