ಭಾನುವಾರ, ಆಗಸ್ಟ್ 1, 2021
21 °C

ಟೈಟಾನಿಕ್ ಸಿನಿಮಾದ ನಾಯಕ ನಾಯಕಿ ಅವತಾರದಲ್ಲಿ ಶಿಲ್ಪಾ ಶೆಟ್ಟಿ–ರಾಜ್ ಕುಂದ್ರಾ!

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾರಾ ದಂಪತಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಸಾಮಾಜಿಕ ಜಾಲತಾಣಗಳ ಮುಖಾಂತರ ಸದಾ ತಮ್ಮ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ.

ಅದರಲ್ಲೂ ರಾಜ್‌ಕುಂದ್ರಾ ಅವರಂತೂ ಕೆಲವು ಸಲ ತಾವೇ ಎಡಿಟ್ ಮಾಡಿರುವ ವಿಡಿಯೊಗಳನ್ನು ಹಾಕಿಕೊಂಡು ತಮಗೆ ತಾವೇ ಟ್ರೋಲ್ ಮಾಡಿಕೊಳ್ಳುವುದುಂಟು.

ಈಗ ಇಂತಹದ್ದೇ ಕೆಲಸವನ್ನು ರಾಜ್ ಮಾಡಿದ್ದಾರೆ. ಸಾರ್ವಕಾಲಿಕ ಸೂಪರ್‌ಹಿಟ್ ಸಿನಿಮಾ ಹಾಲಿವುಡ್‌ನ ಟೈಟಾನಿಕ್ ನ ಐಕಾನಿಕ್ ದೃಶ್ಯವನ್ನು ರಾಜ್ ಎಡಿಟ್ ಮಾಡಿದ್ದಾರೆ. ನೌಕೆಯಲ್ಲಿ ಟೈಟಾನಿಕ್ ನಾಯಕ ನಾಯಕಿ ತಂಗಾಳಿಯಲ್ಲಿ ವಿಹರಿಸುತ್ತಿರುವ ದೃಶ್ಯದ ಜೊತೆ ತಮ್ಮ ಪತ್ನಿ ಶಿಲ್ಪಾ ಶೆಟ್ಟಿ ಕೇಟ್‌ ವಿನ್ಸ್‌ಲೆಟ್‌ ಅವತಾರದಲ್ಲಿ ಹಾಗೂ ತಾವು ಲಿಯೋನಾರ್ಡೋ ಡಿ ಕ್ಯಾಫ್ರಿಯೋ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

That crazy Punjabi couple from the Titanic are back! Proof they were Punjabi..she threw ‘the diamond’ in the ocean! ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಅಭಿಮಾನಿಗಳು ಬಗೆ ಬಗೆಯಾಗಿ ಕಮೆಂಟ್‌ಗಳನ್ನು ಮಾಡಿದ್ದು 43 ಸಾವಿರ ಜನ ವಿಡಿಯೊವನ್ನು ಲೈಕ್ ಮಾಡಿದ್ದಾರೆ. ಅಲ್ಲದೇ ಈ ವಿಡಿಯೊವನ್ನು ಕೆಲವರು ಟ್ರೋಲ್ ಸಹ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು