ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ ಪೂರ್ತಿ ಮುಚ್ಚಿಕೊಂಡು ಬಂದು ಟ್ರೋಲ್‌ಗೆ ಸಿಲುಕಿದ ರಾಜ್‌ ಕುಂದ್ರಾ

Last Updated 15 ಮಾರ್ಚ್ 2022, 7:26 IST
ಅಕ್ಷರ ಗಾತ್ರ

ಬೆಂಗಳೂರು: ಆಶ್ಲೀಲ ವಿಡಿಯೊ ಪ್ರದರ್ಶಿಸುವ ಆ್ಯಪ್ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ, ಸಿನಿಮಾ ವೀಕ್ಷಣೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಂದರ್ಭ ಮುಖ ಪೂರ್ತಿ ಮುಚ್ಚಿಕೊಂಡು ಹೋಗಿ ಟ್ರೋಲ್‌ಗೆ ಸಿಲುಕಿದ್ದಾರೆ.

ವಿಡಿಯೊ ಆ್ಯಪ್ ಪ್ರಕರಣದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ.

ಆದರೆ ಮುಂಬೈನಲ್ಲಿ ಸೋಮವಾರ ರಾತ್ರಿ ನಡೆದ ‘ದಿ ಬ್ಯಾಟ್‌ಮನ್‘ ಸಿನಿಮಾ ಪ್ರದರ್ಶನದ ವೇಳೆ ರಾಜ್ ಕುಂದ್ರಾ, ಛಾಯಾಗ್ರಾಹಕರ ಕಣ್ಣಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮುಖವನ್ನು ಪೂರ್ತಿ ಮುಚ್ಚುವ ಉಡುಪು ಧರಿಸಿ ಆಗಮಿಸಿದ್ದರು.

ಆದರೆ ಅವರ ಗುರುತು ಹಿಡಿದ ಛಾಯಾಗ್ರಾಹಕರು, ಕುಂದ್ರಾ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಫೋಟೊ ಕ್ಲಿಕ್ಕಿಸಿದ್ದಾರೆ.

ಗುರುತು ಹಿಡಿಯದಂತೆ ಕುಂದ್ರಾ ಯತ್ನಿಸಿದರೂ, ಮುಖ ಮುಚ್ಚಿಕೊಳ್ಳಲು ಮಾಡಿದ ತಂತ್ರ ಬಯಲಾಯಿತು ಎಂದು ನೆಟ್ಟಿಗರು ಕಾಮೆಂಟ್ ಮೂಲಕ ಅವರನ್ನು ಟ್ರೋಲ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT