ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೌದು, ಖಂಡಿತವಾಗಿಯೂ ನಾನೂ–ಆಲಿಯಾ ಶೀಘ್ರದಲ್ಲೇ ಮದುವೆಯಾಗುತ್ತೇವೆ: ರಣಬೀರ್ ಕಪೂರ್

Last Updated 30 ಮಾರ್ಚ್ 2022, 11:06 IST
ಅಕ್ಷರ ಗಾತ್ರ

ಬೆಂಗಳೂರು: ನಾವಿಬ್ಬರೂ ಖಂಡಿತವಾಗಿ ಮದುವೆಯಾಗುತ್ತೇವೆ. ಅದೂ ಶೀಘ್ರದಲ್ಲೇ.. ಆದರೆ ಮದುವೆ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ.. ಹೀಗೆಂದು ಬಾಲಿವುಡ್ ನಟ ರಣಬೀರ್ ಕಪೂರ್ ಹೇಳಿದ್ದಾರೆ.

ರಿಷಿ ಕಪೂರ್ ಅವರ ಅಭಿನಯದ ಕೊನೆಯ ಚಿತ್ರ ‘ಶರ್ಮಾಜಿ ನಮ್‌ಕೀನ್‘ ಬಿಡುಗಡೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿರುವ ಅವರು, ನಾನು ಮತ್ತು ಆಲಿಯಾ ಭಟ್ ಮದುವೆಯಾಗುವುದು ಖಚಿತ. ಆದರೆ ದಿನಾಂಕ ಇನ್ನಷ್ಟೇ ಗೊತ್ತುಮಾಡಬೇಕಿದೆ ಎಂದಿದ್ದಾರೆ.

ಮದುವೆ ವಿಚಾರವಾಗಿ ಎರಡೂ ಕುಟುಂಬಗಳು ಉತ್ಸಾಹ ತೋರಿಸಿದ್ದರೂ, ದಿನಾಂಕ ನಿಗದಿಪಡಿಸಿಲ್ಲ.

ಅಲ್ಲದೆ, ಈ ಜೋಡಿ, ಈಗಾಗಲೇ ಮದುವೆ ಸಿದ್ಧತೆಯಲ್ಲಿ ತೊಡಗಿದೆ ಎನ್ನುವುದಕ್ಕೆ ಪೂರಕವಾಗಿ, ವಸ್ತ್ರ ವಿನ್ಯಾಸಕರ ಭೇಟಿ, ರಾಜಸ್ಥಾನದ ಕೋಟೆಯ ವೀಕ್ಷಣೆಗೆ ಜತೆಯಾಗಿ ತೆರಳಿದ್ದು ಕೂಡ ಸುದ್ದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT