ಬುಧವಾರ, ಜೂನ್ 3, 2020
27 °C

ಕನ್ನಡ, ತೆಲುಗು, ತಮಿಳು ಹಾಡಿನ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಎಸ್‌ಪಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

spb

ಬೆಂಗಳೂರು: ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ದೇಶವ್ಯಾಪಿ ಲಾಕ್‌ಡೌನ್ ಆಗಿರುವ ಹೊತ್ತಲ್ಲಿ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅವರು ಕೊರೊನಾ ಜಾಗೃತಿ ಗೀತೆಯೊಂದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
'ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾ, 
ಅದಕೆ ನಾವೇ ಈಗ ದಾರಿಯಾಗದಿರೋಣ
ಕಾಲ ಬುಡಕೆ ಬರುವನಕ ಕಾಯದಿರೋಣ
ನಾವೆ ಇಂದು ನಮಗೊಂದು ಅವಕಾಶ ಕೊಡೋಣ'  ಎಂಬ ಈ ಹಾಡಿಗೆ ಸ್ವತಃ ಎಸ್‌ಪಿಬಿಯವರೇ ಸ್ವರ ಸಂಯೋಜನೆ ಮಾಡಿದ್ದಾರೆ. ಹಾಡಿನ ಸಾಹಿತ್ಯ ಜಯಂತ್ ಕಾಯ್ಕಿಣಿಯವರದ್ದು.

ಇದೇ ರೀತಿ ತಮಿಳು ಮತ್ತು ತೆಲುಗಿನಲ್ಲಿಯೂ ಎಸ್‌ಪಿಬಿ ಕೊರೊನಾ ಜಾಗೃತಿ ಗೀತೆಯನ್ನು ಹಾಡಿದ್ದಾರೆ. ತಮಿಳು ಅವತರಣಿಕೆಯ ಸಾಹಿತ್ಯ ವೈರಮುತ್ತು ಅವರದ್ದು, ತೆಲುಗು ಅವತರಣಿಕೆಯ ಸಾಹಿತ್ಯ ವೆನ್ನೆಲಕಂಠಿ ಅವರದ್ದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು