ಶನಿವಾರ, ಅಕ್ಟೋಬರ್ 16, 2021
22 °C

ಫಿಟ್‌ನೆಸ್ ಮಂತ್ರ ಹೇಳಿದ ನಟ ಸುನೀಲ್ ಶೆಟ್ಟಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಸುನೀಲ್ ಶೆಟ್ಟಿ ಅವರು ನಟನೆ ಜೊತೆ, ಉದ್ಯಮ, ಸಮಾಜ ಸೇವೆಯೊಂದಿಗೆ ಸಕ್ರಿಯರಾಗಿ ಜನರ ಹಾಗೂ ಅಭಿಮಾನಿಗಳ ನಡುವೆ ಸದಾ ಗುರುತಿಸಿಕೊಳ್ಳುತ್ತಾರೆ.

ಸುನೀಲ್ ಶೆಟ್ಟಿ ಅವರು ತಮ್ಮ 60 ನೇ ವಯಸ್ಸಿನಲ್ಲೂ ಫಿಟ್‌ನೆಸ್‌ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದಲ್ಲದೇ, ದೇಹವನ್ನು ಫಿಟ್‌ನೆಸ್ ಕಾಪಾಡಿಕೊಂಡಿರುವ ತರುಣರಂತೆ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಅವರು ನಿಯಮಿತವಾದ ವ್ಯಾಯಾಮ ಹಾಗೂ ಯೋಗದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಅವರು ಫಿಟ್‌ನೆಸ್‌ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸಲಹೆ ಸೂಚನೆ ಕೊಡುವುದರಲ್ಲಿ ಮುಂದು.

ಇದೀಗ ಅವರು ತಮ್ಮ ಅಭಿಮಾನಿಗಳಿಗೆ ಫಿಟ್‌ನೆಸ್‌ ಮಂತ್ರವನ್ನು ಹೇಳಿಕೊಟ್ಟಿದ್ದು ಪುಸ್ತಕವೊಂದನ್ನು ಓದಿ ನಿಮ್ಮ ಫಿಟ್‌ನೆಸ್‌ ಕಾಪಾಡಿಕೊಳ್ಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಲಹೆ ನೀಡಿದ್ದಾರೆ.

ಫಿಟ್‌ನೆಸ್ ಗುರು ಜೀತೆಂದ್ರ ಚೌಕ್ಸಿ ಅವರ Lose Fat, Get Fittr ಎಂಬ ಪುಸ್ತಕದ ಬಗ್ಗೆ ಸುನೀಲ್ ಶೆಟ್ಟಿ ಉಲ್ಲೇಖಿಸಿದ್ದು, ‘ನೀವು ಫಿಟ್‌ನೆಸ್‌ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು, ಹೆಚ್ಚು ಖರ್ಚು ಮಾಡಿ ತೊಂದರೆ ತೆಗೆದುಕೊಳ್ಳುವುದಕ್ಕಿಂತ ಈ ಪುಸ್ತಕ ಓದಿ, ನಾನು ಫಿಟ್‌ನೆಸ್ ಬಗ್ಗೆ ಓದಿದ ಅತ್ಯಂತ ಶ್ರೇಷ್ಠ ಪುಸ್ತಕ ಇದು. ಹೆಚ್ಚು ಹಣ ತೆತ್ತು ಡಯಟ್ ಮಾಡುವ ಬದಲು ಈ ಪುಸ್ತಕ ನಿಮಗೆ ಮಾನಸಿಕವಾಗಿ ಒಂದು ಸ್ಥಿರತೆ ಒದಗಿಸುತ್ತದೆ‘ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.

‘ಈ ಪುಸ್ತಕ ನಿಮ್ಮ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಹಾಗೂ ಫಿಟ್‌ನೆಸ್ ಕಾಪಾಡಿಕೊಳ್ಳಲು ಖಂಡಿತ ಸಹಾಯ ಮಾಡುತ್ತದೆ‘ ಎಂದು ಹೇಳಿದ್ಧಾರೆ.

ಇದರ ಜೊತೆ ಸುನೀಲ್ ಶೆಟ್ಟಿ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದು, ಕಳೆದ ಶನಿವಾರ ಅವರು ಮುಂಬೈ ಪೊಲೀಸರಿಗಾಗಿ ಶುದ್ಧ ಗಾಳಿ ಒದಗಿಸಬೇಕು ಎಂದು 800 ಗಾಳಿ ಶುದ್ಧಿಕರಿಸುವ ಯಂತ್ರ ಕೊಡುಗೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು