ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಂಡನ್‌ ಕಾನ್ಫಿಡೆನ್ಶಿಯಲ್’ ವೆಬ್‌ ಸರಣಿ ಇಂದು ತೆರೆಗೆ

Last Updated 17 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮೌನಿ ರಾಯ್ ಹಾಗೂ ಪುರುವ್ ಕೊಹ್ಲಿ ನಟನೆಯ ಬಹುನಿರೀಕ್ಷಿತ ‘ಲಂಡನ್‌ ಕಾನ್ಫಿಡೆನ್ಶಿಯಲ್’ ವೆಬ್‌ಸರಣಿ ಇಂದು ಜೀ5ನಲ್ಲಿ ಬಿಡುಗಡೆಯಾಗಲಿದೆ.

ಬಾಲಿವುಡ್‌ ಸಿನಿಮಾ ಹಾಗೂ ಹಿಂದಿ ಕಿರುತೆರೆಯ ಮೂಲಕ ಖ್ಯಾತಿ ಗಳಿಸಿರುವ ಮೌನಿ ರಾಯ್ ಈ ವೆಬ್‌ ಸರಣಿಯ ಮೂಲಕ ಡಿಟಿಜಲ್ ಜಗತ್ತಿಗೆ ಕಾಲಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರವೇಶ್‌ ರಾನಾ, ಕುಲ್‌ರಾಜ್‌ ರಾಂಧವ್‌, ಸಾಗರ್ ಆರ್ಯ, ಜಸ್ ಬಿನಾಂಗ್‌, ಕಿರೆನ್ ಜೋಗಿ, ದಿಲ್‌ಜೋಹನ್ ಸಿಂಗ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ವೆಬ್‌ಸರಣಿ ಹಿಂದಿ ಭಾಷೆಯದ್ದಾಗಿದೆ. ಗೂಢಾಚಾರಿಕೆ ಹಿನ್ನೆಲೆಯುಳ್ಳ ಈ ವೆಬ್‌ಸರಣಿಯುಟೀಸರ್‌ ಮೂಲಕ ಕುತೂಹಲ ಹೆಚ್ಚಿಸಿತ್ತು.

ವೈರಸ್ ಹರಡುವಿಕೆಯಲ್ಲಿ ಚೀನಾ ಕಮ್ಯೂನಿಸ್ಟ್ ಪಕ್ಷದ ಪಾತ್ರದ ಕುರಿತು ಸಾಕ್ಷಿಗಳನ್ನು ಸಂಗ್ರಹಿಸುವ ಆರ್‌ ಅಂಡ್ ಎಡಬ್ಲ್ಯೂ ಅಧಿಕಾರಿಗಳು ಅದನ್ನು ಪ್ರಸ್ತುತಪಡಿಸಲು ಅಂತಿಮ ಸಾಕ್ಷಿಯಾಗಿ ಹುಡುಕುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ರಾ ಅಧಿಕಾರಿಯನ್ನು ಬಂಧಿಸುವ ಚೀನಾ ಅಧಿಕಾರಿಗಳು ಅವರಿಗೆ ಹಿಂಸೆ ನೀಡುವ ದೃಶ್ಯವು ಟೀಸರ್‌ನಲ್ಲಿದೆ.

ಈ ವೆಬ್‌ ಸರಣಿಗೆ ಕನ್ವಲ್ ಸೇಥಿ ಅವರ ನಿರ್ದೇಶನವಿದೆ. ಮೋಹಿತ್ ಛಬ್ರಾ ಹಾಗೂ ಅಜಯ್‌ ರೈ ಹಣ ಹೂಡಿಕೆ ಮಾಡಿದ್ದಾರೆ.

ನಿರ್ದೇಶಕ ಕನ್ವಲ್‌ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿರುವ ಮೌನಿ ‘ಕನ್ವಲ್ ಸರ್‌ ನಿಖರವಾದ, ಗ್ರಹಿಕೆ ಹಾಗೂ ತಾಳ್ಮೆಯುಳ್ಳ ಅದ್ಭುತ ಸೃಷ್ಟಿಕೃತ. ಅವರು ತುಂಬಾ ಸುಂದರ ಮನಸ್ಸನ್ನು ಹೊಂದಿದ್ದಾರೆ. ನಾನು ಇಷ್ಟರಲ್ಲೇ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

ಪಶ್ಚಿಮಬಂಗಾಳ ಮೂಲದ ಮೌನಿರಾಯ್ ಹಿಂದಿಯ ‘ಮಹಾದೇವ’, ‘ನಾಗಿನ್’ ಸರಣಿ‌ ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ಗೋಲ್ಡ್‌’ ಸಿನಿಮಾದಲ್ಲೂ ನಟಿಸಿದ್ದಾರೆ ಮೌನಿ.ನಾಗಿನ್ 3 ಧಾರಾವಾಹಿಯೂ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ‘ನಾಗಕನ್ನಿಕೆ’ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದು ಆ ಮೂಲಕ ಮೌನಿ ಕನ್ನಡದಲ್ಲೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT