ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾದ ಬಳಿಕ ಮೊದಲ ಲೋಹರಿ ಆಚರಣೆಯಲ್ಲಿ ವಿಕ್ಕಿ-ಕತ್ರಿನಾ

Last Updated 14 ಜನವರಿ 2022, 8:01 IST
ಅಕ್ಷರ ಗಾತ್ರ

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ವೈವಾಹಿಕ ಜೀವನವನ್ನು ಸಂಭ್ರಮಿಸುತ್ತಿದ್ದಾರೆ. ದಂಪತಿ ಇತ್ತೀಚೆಗಷ್ಟೇ ತಮ್ಮ ಮದುವೆಯ ಒಂದು ತಿಂಗಳೋತ್ಸವವನ್ನು ಆಚರಿಸಿದ್ದಾರೆ. ಈಗ, ಲೋಹರಿಯ ಶುಭ ಸಂದರ್ಭದಲ್ಲಿ, ಇಬ್ಬರೂ ಒಟ್ಟಿಗೆ ಸಮಯ ಕಳೆಯಲು ನಿರ್ಧರಿಸಿದ್ದಾರೆ. ವಿಕ್ಕಿ ಮತ್ತು ಕತ್ರಿನಾ ಇಬ್ಬರೂ ತಮ್ಮ ಮೊದಲ ಲೋಹರಿ ಆಚರಣೆಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೊಗಳಲ್ಲಿ ಇಬ್ಬರೂ ಪರಸ್ಪರ ಅಪ್ಪಿಕೊಂಡು ದೀಪೋತ್ಸವದ ಮುಂದೆ ನಿಂತಿರುವುದನ್ನು ಕಾಣಬಹುದು. ವಿಕ್ಕಿ ಚಳಿಗಾಲದ ಕ್ಯಾಶುಯಲ್‌ಗಳನ್ನು ಧರಿಸಿದ್ದರೆ, ಕತ್ರಿನಾ ಕೆಂಪು ಸಲ್ವಾರ್ ಕಮೀಜ್‌ ಧರಿಸಿ, ಅದರ ಮೇಲೆ ಕಪ್ಪು ಬಣ್ಣದ ಬಾಂಬರ್ ಜಾಕೆಟ್ ಕೂಡ ಧರಿಸಿರುವುದನ್ನು ಕಾಣಬಹುದು.

ಈ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಕ್ಕಿ, 'ಹ್ಯಾಪಿ ಲೋಹರಿ!' ಎಂದು ಬರೆದಿದ್ದಾರೆ.

ಡಿ. 9 ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ವಿಕ್ಕಿ ಮತ್ತು ಕತ್ರೀನಾ ಅದ್ಧೂರಿಯಾಗಿ ವಿವಾಹವಾಗಿದ್ದರು. ಜ. 9 ರಂದು ತಮ್ಮ ವಿವಾಹವಾಗಿ ಒಂದು ತಿಂಗಳಾದ ಸಂದರ್ಭ ಇಬ್ಬರೂ ಪರಸ್ಪರ ಶುಭಾಶಯ ಕೋರಿಕೊಂಡಿದ್ದರು.

ಹನಿಮೂನ್‌ಗಾಗಿ ಮಾಲ್ಡೀವ್ಸ್‌ನ ಸುಂದರ ದ್ವೀಪಗಳಿಗೆ ಭೇಟಿ ನೀಡಿದ್ದರು. ಅಲ್ಲದೆ, ವಿಕ್ಕಿ-ಕತ್ರಿನಾ ಈಗಾಗಲೇ ತಮ್ಮ ಹೊಸ ಫ್ಲಾಟ್‌ಗೆ ತೆರಳಿದ್ದಾರೆ. ಅಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಅಕ್ಕಪಕ್ಕದ ಫ್ಲಾಟ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT