ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಿಕಾ ಚೌಧರಿ –ಪ್ರಿನ್ಸ್ ನರುಲಾ ಜೋಡಿಯ ‘ತೇರಾ ಮೇರಾ ನಾಮ್’ ಹಾಡು ವೈರಲ್

Last Updated 17 ಏಪ್ರಿಲ್ 2022, 9:49 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಯುವಿಕಾ ಚೌಧರಿ –ಪ್ರಿನ್ಸ್ ನರುಲಾ ಅವರ ಹೊಸ ಹಾಡು 'ತೇರಾ ಮೇರಾ ನಾಮ್' ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ನಿರ್ಮಾಪಕರಾಗುವುದಕ್ಕಿಂತ ಪ್ರಾಜೆಕ್ಟ್‌ನಲ್ಲಿ ನಟನಾಗಿ ತೊಡಗಿಸಿಕೊಳ್ಳುವುದು ತುಂಬಾ ವಿಭಿನ್ನವಾಗಿದೆ. ಮತ್ತು ನಿರ್ಮಾಪಕರಾಗಿ ನಾವು ಕಲಿತದ್ದು ಬಹಳಷ್ಟಿದೆ. ಯುವಿಕಾ ಜತೆಗೆ ಒಟ್ಟಿಗೆ ಕೆಲಸ ಮಾಡಿರುವುದು ಅದ್ಭುತ ಅನುಭವ’ ಎಂದು ಪ್ರಿನ್ಸ್ ನರುಲಾ ಹೇಳಿಕೊಂಡಿದ್ದಾರೆ.

ಯುಟ್ಯೂಬ್‌ನಲ್ಲಿ ಈ ಹಾಡು ಬಿಡುಗಡೆಯಾದ ಎರಡೇ ದಿನದಲ್ಲಿ 11.54 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಖಾರಾ ಅವರ ಸಾಹಿತ್ಯವಿರುವ ಈ ಹಾಡಿಗೆ ಗಾಯಕ ಜೆಹಾನ್ ಧ್ವನಿಗೂಡಿಸಿದ್ದಾರೆ.

ಲೋಹ್ರಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಹಾಡು ಪಂಜಾಬ್‌ನ ಗ್ರಾಮೀಣ ಜನರು ಇಷ್ಟವಾಗಲಿದೆ ಎಂದು ಯುವಿಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT