ಕನ್ನಡಕ್ಕೆ ಡಬ್ ಆಗಲಿದೆ ರಜನೀಕಾಂತ್ ಅಭಿನಯದ ‘2.0’ ಸಿನಿಮಾ!

7

ಕನ್ನಡಕ್ಕೆ ಡಬ್ ಆಗಲಿದೆ ರಜನೀಕಾಂತ್ ಅಭಿನಯದ ‘2.0’ ಸಿನಿಮಾ!

Published:
Updated:
Deccan Herald

ಬೆಂಗಳೂರು: ನಟ ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘2.0’. ಈ ಸಿನಿಮಾವು ಇದೇ 29ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಬಿಡುಗಡೆಯ ದಿನ ಸಮೀಪಿಸುತ್ತಿದ್ದಂತೆ ಈ ಸಿನಿಮಾ ಕನ್ನಡಕ್ಕೂ ಡಬ್ ಆಗಲಿದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದ್ದು ಗಾಂಧಿನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಡಬ್ಬಿಂಗ್ ಸಂಬಂಧ ರಾಜ್ಯದಲ್ಲಿ ಪರ ವಿರೋಧದ ಚರ್ಚೆಗಳು ಇನ್ನೂ ನಡೆಯುತ್ತಲೇ ಇವೆ. ಚಿತ್ರರಂಗದ ಬಹುತೇಕರು ಡಬ್ಬಿಂಗ್‌ಗೆ ವಿರೋಧ ವ್ಯಕ್ತಪಡಿಸಿದರೆ, ಕೆಲವೇ ಮಂದಿ ಪರವಾಗಿ ನಿಂತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ‘2.0’ ಕನ್ನಡದಲ್ಲಿ ತೆರೆಗೆ ಬರಲಿದೆ ಎಂಬ ಮಾತು ಡಬ್ಬಿಂಗ್ ಪರ ಇರುವವರಿಗೆ ಖುಷಿಕೊಟ್ಟರೆ, ವಿರೋಧಿಗಳ ನಿದ್ದೆಗೆಡಿಸಿದೆ.

ರಾಜ್ಯದಲ್ಲಿ ನಂದಿನಿ ಎಂಟರ್‌ಟೈನ್‌ಮೆಂಟ್ ಎಂಬ ಸಂಸ್ಥೆ ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಲು ಮುಂದಾಗಿದ್ದು, ಈ ಸಂಬಂಧ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆಯಂತೆ. ಈ ಮಾಹಿತಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ಚಿತ್ರದ ಬಿಡುಗಡೆಯಂದೇ ಗೊತ್ತಾಗಲಿದೆ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !