ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಂಗ ವಿಜ್ಞಾನ ಬೇಸಿಗೆ ಶಿಬಿರ

children's free summer camp
Last Updated 19 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಸಮಾಜದ ತಳಸ್ತರದಲ್ಲಿ ಬದುಕುವ ಸಮುದಾಯದ ಮಕ್ಕಳಿಗಾಗಿ ಸಮುದಾಯ ಕರ್ನಾಟಕ ಐದು ವರ್ಷಗಳಿಂದ ರಂಗ ವಿಜ್ಞಾನ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ.

ಅಸಂಘಟಿತ ವಲಯದ-ಮನೆ ಕೆಲಸದ ಮಹಿಳೆಯರು, ಅಟೋ ಚಾಲಕರು, ಕಟ್ಟಡ ಕಾರ್ಮಿಕರು ಮುಂತಾದ ವಲಯದ ಅವಕಾಶ ವಂಚಿತ ಮಕ್ಕಳಿಗೆ ರಂಗಭೂಮಿಯ ಪರಿಚಯ ಮಾಡಿಸುವ ಮತ್ತು ರಂಗ ಚಟುವಟಿಕೆಗಳ ಮೂಲಕ ವೈಜ್ಞಾನಿಕ ಮನೋಭಾವ ಮೂಡಿಸುವ ರೂಢಿಸುವ ಪ್ರಯತ್ನವಿದು.

ಈ ಬಾರಿಯ ಶಿಬಿರವನ್ನು ಕರ್ನಾಟಕ ನಾಟಕ ಅಕಾಡೆಮಿಯ ಸಹಕಾರದೊಂದಿಗೆ ಅವರ ಸಂಯುಕ್ತಾಶ್ರಯದಲ್ಲಿ ನ್ಯಾಷನಲ್ ಪ್ರೈಮರಿ ಶಾಲೆ ಬಸವನಗುಡಿ ಆವರಣದಲ್ಲಿ ಏ. 20ರಿಂದ 30ರವರೆಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ಮಕ್ಕಳಿಗಾಗಿ ನಾಟಕವೊಂದನ್ನು ಸಿದ್ಧಪಡಿಸಿ ಕೊನೆಯ ದಿನ ಪ್ರದರ್ಶಿಸಲಾಗುವುದು ಮತ್ತು ವೈಜ್ಞಾನಿಕ ಮನೋವೃತ್ತಿಯ ಬೆಳವಣಿಗೆಗಾಗಿ ತಜ್ಞರಿಂದ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುವುದು ಎಂದು ಶಿಬಿರದ ಸಂಯೋಜಕಿ ಬಸಮ್ಮ ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆ: 94480 72431, 90353 14035.

***

ರಂಗ ವಿಜ್ಞಾನ ಮಕ್ಕಳ ಬೇಸಿಗೆ ಶಿಬಿರ 2019 ಉದ್ಘಾಟನೆ: ಅತಿಥಿಗಳು–ವಿದ್ಯಾರಣ್ಯ, ಎಸ್.ವಿ.ಗೋವಿಂದರಾಜು,
ಎಸ್. ರವಿಶಂಕರ್, ದತ್ತರಾಜ ಹೆಗಡೆ, ಸುನಿಲ್. ಅಧ್ಯಕ್ಷತೆ–ಎಂ.ಜಿ. ವೆಂಕಟೇಶ್. ಆಯೋಜನೆ– ಸಮುದಾಯ ಕರ್ನಾಟಕ, ಕರ್ನಾಟಕ ನಾಟಕ ಅಕಾಡೆಮಿ, ನ್ಯಾಷನಲ್ ಎಜುಕೇಷನ್ ಸೊಸೈಟಿ. ಸ್ಥಳ–ಚಿ. ಸದಾಶಿವಯ್ಯ ರಂಗಮಂದಿರ, ನ್ಯಾಷನಲ್ ಹೈಯರ್ ಪ್ರೈಮರಿ ಸ್ಕೂಲ್, ಪಂಪ ಮಹಾಕವಿ ರಸ್ತೆ, ಬಸವನಗುಡಿ. ಮಧ್ಯಾಹ್ನ 3.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT