ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದರಾಯಣ ನಾಟಕ

Last Updated 8 ಮಾರ್ಚ್ 2019, 19:32 IST
ಅಕ್ಷರ ಗಾತ್ರ

ಬಾದರಾಯಣ ನಾಟಕ ನಗರದಲ್ಲಿ ಮೂರು ಪ್ರದರ್ಶನಗೊಳ್ಳಲಿದೆ. ಬಾಲ್ಯದಲ್ಲೇ ತನ್ನ ಪೋಷಕರನ್ನು ಕಳೆದುಕೊಂಡಿರುವ ಬಾದರಾಯಣನ ಸುತ್ತ ನಾಟಕದ ಕಥಾ ವಸ್ತುವು ನಡೆಯುತ್ತದೆ.

ಪೋಷಕರನ್ನು ಕಳೆದುಕೊಂಡ ನಾಯಕ ತನ್ನ ಸೋದರಮಾವನ ಮನೆಯಲ್ಲಿ ಬೆಳೆದು ಅವರ ಸಹಾಯದಿಂದ ವಿದ್ಯಾವಂತನಾಗುತ್ತಾನೆ. ಕೆಲಸ ಸಿಗದೆ ಸೋದರಮಾವ - ಸೋದರತ್ತೆಯಿಂದ ನಿರಂತರವಾಗಿ ಅವಮಾನವನ್ನು, ಕಷ್ಟವನ್ನು ಅನುಭವಿಸುತ್ತಾನೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಾನೆ.

ದಾರಿಯಲ್ಲಿಒಬ್ಬ ವೃದ್ದ ಹಾಗೂ ಅವನ ಹತ್ತಿರವಿರುವ ಮಾಯಾ ಹೆಣ್ಣಿನ ಪರಿಚಯವಾಗಿ ಅವರ ಸಹಾಯದಿಂದ ಅವನು ತನ್ನನ್ನು ತಾನೇ ಹೇಗೆ ಹುಡುಕಿಕೊಳ್ಳುತ್ತಾನೆ ಹಾಗೂ ಮಾಯೆಯ ಮೂಲಕ ಯಾವುದೇ ಬದಲಾವಣೆಯನ್ನು ತರಲಾಗುವುದಿಲ್ಲ ಎಂಬ ವಿಷಯವನ್ನು ಮುಂದಿಡುತ್ತಾನೆ.

* ನಿರ್ದೇಶನ: ರಾಜೇಶ್

* ಸ್ಥಳ: ಪ್ರಭಾತ್ ಕೆ.ಇ.ಎ ಕಲಾಮಂದಿರ, ಬಸವೇಶ್ವರ ನಗರ,

* ಸಮಯ: ಶನಿವಾರ 4.30 & 7.30 ಕ್ಕೆ

* ಮೂರನೇ ಪ್ರದರ್ಶನದಸ್ಥಳ: ರಂಗಶಂಕರ, ಜೆ.ಪಿ.ನಗರ, 12ನೇ ಮಾರ್ಚ್‌, ಸಂಜೆ 7:30 ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT