ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಿಮಲ್ ಫಾರ್ಮ್’ ನಾಟಕ ಇಂದು ಪ್ರದರ್ಶನ

Last Updated 29 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ರಂಗಶಂಕರದಲ್ಲಿ ಅಕ್ಟೋಬರ್ 27ರಿಂದ ನಾಟಕೋತ್ಸವ ಆರಂಭವಾಗಿದ್ದು, ಅ. 30ರಂದು ‘ಅನಿಮಲ್ ಫಾರ್ಮ್’ ನಾಟಕ ಪ್ರದರ್ಶನವಾಗಲಿದೆ.

ಕಲ್ಪನೆಯ ಪ್ರತಿರೂಪವಾಗಿರುವ ಈ ನಾಟಕ ತೀಕ್ಷ್ಣ, ವ್ಯಂಗ್ಯದ ಭಾವಗಳನ್ನು ಸೂಸುತ್ತದೆ. ಮಾಲೀಕನಾಗಿರುವ ಮನುಷ್ಯನ ವಿರುದ್ಧ ಪ್ರಾಣಿಗಳು ಸಿಡಿದೆದ್ದು ತಮ್ಮ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳುವ ಕತೆ ಇದು. ಜಾರ್ಜ್ ಆರ್ವೆಲ್ ರಷ್ಯಾದ ಕಮ್ಯುನಿಸ್ಟ್ ದಬ್ಬಾಳಿಕೆಯ ವಿರುದ್ಧ ಬರೆದ ಕತೆ. ಇದನ್ನು ಬರೆದು ವರ್ಷಗಳೇ ಕಳೆದರೂ ಜಗತ್ತಿನೆಲ್ಲೆಡೆ ರಾಜಕೀಯ ವ್ಯವಸ್ಥೆಯಲ್ಲಿ ಈ ಕತೆಯ ಹೋಲಿಕೆ ಕಂಡು ಬಂದು ಇದೊಂದು ಕಾಲಾತೀತ ಸಾಮಾಜಿಕ-ರಾಜಕೀಯ ವಿಡಂಬನೆ ಹಾಗೂ ವ್ಯಾಖ್ಯಾನವಾಗಿ ಉಳಿದುಕೊಂಡಿದೆ. ಇಲ್ಲಿ ಪ್ರಸ್ತುತವಾಗುವ ‘ಅನಿಮಲ್ ಫಾರ್ಮ್’ ನಾಟಕವು ಮೂಲ ವಸ್ತುವಿಗೆ ಬದ್ಧವಾಗಿ ಪ್ರಸ್ತುತ ಸನ್ನಿವೇಶಕ್ಕೆ ತನ್ನನ್ನು ಒಗ್ಗಿಸಿಕೊಂಡಿದೆ.

‘ಅನಿಮಲ್ ಫಾರ್ಮ್’ ನಾಟಕ ಪ್ರದರ್ಶನ: ತಂಡ–ತಹಾತೋ. ಭಾಷೆ– ಇಂಗ್ಲಿಷ್, ಕನ್ನಡ, ಹಿಂದಿ. ಅವಧಿ–90 ನಿಮಿಷ. ರಚನೆ–ನೆಲ್ಸನ್ ಬಾಂಡ್, ಜಾರ್ಜ್ ಆರ್ವೆಲ್, ನಿರ್ದೇಶನ–ಪ್ರಶಾಂತ್ ನಾಯರ್. 8 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತ. ಸ್ಥಳ–ರಂಗಶಂಕರ, ಜೆ.ಪಿ.ನಗರ ಎರಡನೇ ಹಂತ. ಟಿಕೆಟ್ ದರ ₹ 200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT