‘ಕನ್ಯಾ ಕಪಟ’ ನಾಟಕ ಪ್ರದರ್ಶನ

7

‘ಕನ್ಯಾ ಕಪಟ’ ನಾಟಕ ಪ್ರದರ್ಶನ

Published:
Updated:
Deccan Herald

ರಾಘವೇಂದ್ರ ಎಂಬ ವ್ಯಕ್ತಿಯ ಪರಿಚಯದೊಂದಿಗೆ ನಾಟಕವು ಆರಂಭವಾಗುತ್ತದೆ. ರಾಘವೇಂದ್ರ ಸೋಮಾರಿ ಎಂತಲೇ ಖ್ಯಾತಿ ಹೊಂದಿದ್ದವನು. ಅವನು ಪ್ರತಿಯೊಂದಕ್ಕೂ ತನ್ನ ಹೆಂಡತಿಯನ್ನೇ ಅವಲಂಬಿಸಿರುತ್ತಾನೆ. ಮನೆಯವರು ಅವನು ಏನಾದರು ಉದ್ಯೋಗ ಮಾಡಲಿ ಎಂದು ಜಗಳ ಮಾಡುತ್ತಲೇ ಇರುತ್ತಾರೆ. ಕೊನೆಗೆ ಮನೆಯವರ ಬೈಗುಳ ಸಹಿಸಲಾಗದೆ ‘ಎ ಟು ಜಡ್‌ ಕನ್ಸಲ್ಟೆನ್ಸಿ’ ಆರಂಭಿಸುತ್ತಾನೆ.

ಈ ‘ಎ ಟು ಜಡ್‌ ಕನ್ಸಲ್ಟೆನ್ಸಿ’ ಎಂಬುದು ಅಗತ್ಯವಿರುವ ಯಾವುದೇ ವಿಷಯವಾದರೂ ಅಲ್ಲಿ ಸಹಾಯ ದೊರೆಯುತ್ತದೆ ಎಂಬುದು ಆ ಕನ್ಸಲ್ಟೆನ್ಸಿಯ ಖ್ಯಾತಿ. ಆದರೆ ಅಲ್ಲಿಗೆ ಯಾರು ಬರುತ್ತಿರಲಿಲ್ಲ. ಈ ಕಲ್ಸಟೆನ್ಸಿಯಲ್ಲಿ ಹೊಸಮನಿ ಎಂಬ ಗುಮಾಸ್ತನೊಬ್ಬ ಇರುತ್ತಾನೆ. ಹೆಣ್ಣು ಮಕ್ಕಳೆಂದರೆ ಜೊಲ್ಲು ಸುರಿಸುವವನು. ಜನರಿಲ್ಲದೇ ಭಣಗುಟ್ಟುತ್ತಿದ್ದ ಈ ಆಫೀಸಿಗೆ ಹಲವು ದಿನಗಳ ನಂತರ ಸೋನಾ ಮಾಲಿನಿ ಎಂಬ ಮಹಿಳೆಯೊಬ್ಬಳು ಒಂದು ಪ್ರಕರಣಕ್ಕೆ ಪರಿಹಾರ ದೊರಕಿಸಿಕೊಡುವಂತೆ ಕೇಳಿಕೊಂಡು ಬರುತ್ತಾಳೆ. ಇವಳಿಗೆ ಸಹಾಯ ಮಾಡಲು ಹೋಗಿ ರಾಘವೇಂದ್ರ ಮನೆಯವರೊಂದಿಗಿನ ಸಂಬಂಧ ಹಾಳಾಗುತ್ತದೆ. 

ಹೀಗೆ ಒಂದು ಕಥೆಯ ಸುತ್ತ ಹೆಣೆದಿರುವ ನಾಟಕದ ಅಂತಿಮಘಟ್ಟ ನಮಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಏನದು ಘಟನೆ ಎಂಬುದನ್ನು ನಾವು ನಾಟಕ ನೋಡಿಯೇ ತಿಳಿಯಬೇಕು!  

ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಹವ್ಯಾಸಿ ಕಲಾವಿದರ ‘ರಂಗಚಕ್ರ’ ಕಲಾತಂಡವು ಈ ನಾಟಕವನ್ನು ಪ್ರಸ್ತುತಿ ಪಡಿಸುತ್ತಿದೆ. ಪ್ರೇತವಿವಾಹ, ರಾಧಾ ನಿವಾಸ ಮುಂತಾದ ನಾಟಕಗಳನ್ನು ಈ ತಂಡ ನಿರ್ವಹಿಸಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !