ಸೋಮವಾರ, ಸೆಪ್ಟೆಂಬರ್ 27, 2021
22 °C

‘ಮಾಸದ ಮೆಲುಕು’ ನೂರರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕದ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳಿಗೆ ಉತ್ತೇಜನ ನೀಡಿರುವ ‘ಕಲಾಕದಂಬ ಆರ್ಟ್‌ ಸೆಂಟರ್‌’ ಆರಂಭವಾಗಿ ನೂರು ವರ್ಷಗಳಾಗಿವೆ. ಹಾಗೆಯೇ ಈ ಸಂಸ್ಥೆಯ ‘ಮಾಸದ ಮೆಲುಕು’ ಕಾರ್ಯಕ್ರಮಕ್ಕೂ ನೂರರ ಸಂಭ್ರಮ.

ನೂರರ ಸಂಭ್ರಮವನ್ನು ಆಚರಿಸುವ ಉದ್ದೇಶದಿಂದ ಸೆಪ್ಟೆಂಬರ್‌ 25ರಂದು ಸಂಜೆ 5.30ಕ್ಕೆ ಉದಯಭಾನು ಕಲಾಸಂಘದ ರಂಗಮಂದಿರದಲ್ಲಿ ‘ನೃತ್ಯಗಾಥಾ’ ಹಾಗೂ ‘ಲಯವಾದ್ಯ ವೈವಿಧ್ಯ’ ವಿಶೇಷ ರಂಗಪ್ರಸ್ತುತಿಯನ್ನು ಆಯೋಜಿಸಿದೆ. ಶ್ರೀಪಾದ ಭಟ್‌ ನಿರ್ದೇಶನದಲ್ಲಿ ಅನಘಶ್ರೀ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶಿಸಲಿದ್ದಾರೆ..

ತಾಳವಾದ್ಯ ಕಲಾವಿದ ಗುರುಮೂರ್ತಿ ವೈದ್ಯರು ಕಾರ್ಯಕ್ರಮ ನೀಡಲಿದ್ದಾರೆ. ಯಕ್ಷಗಾನದ ಚಂಡೆ, ಮದ್ದಳೆಯ ಜೊತೆಗೆ ಪಕ್ಕವಾಜು, ತಬಲ ಇತರ ವಾದ್ಯಗಳ ಏಕವ್ಯಕ್ತಿ ನಾದ ವೈವಿಧ್ಯ ಇದರ ವಿಶೇಷ. ಸೃಷ್ಠಿ ಕಲಾ ವಿದ್ಯಾಲಯ ಹಾಗೂ ಕಲಾಕದಂಬ ಸಂಸ್ಥೆಯ ವಿದ್ಯಾರ್ಥಿಗಳಿಂದ ಗಾನಸುಧೆ ಕಾರ್ಯಕ್ರಮವಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು