ಮನಸೂರೆಗೊಳಿಸಿದ ‘ಗಾಂಧಿ’ ನಾಟಕ

7

ಮನಸೂರೆಗೊಳಿಸಿದ ‘ಗಾಂಧಿ’ ನಾಟಕ

Published:
Updated:
Deccan Herald

ಹೊಸಪೇಟೆ: ಬೋಳುವಾರು ಮೊಹಮ್ಮದ್‌ ಕುಂಞ ರಚನೆಯ ‘ಪಾಪು ಗಾಂಧಿ, ಗಾಂಧಿ ಪಾಪು’ ನಾಟಕ ಗುರುವಾರ ನಗರದಲ್ಲಿ ಪ್ರದರ್ಶನ ಕಂಡಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಪರಿಕಲ್ಪನೆಯ ನಾಟಕಕ್ಕೆ ಡಾ. ಶ್ರೀಪಾದ ಭಟ್‌ ನಿರ್ದೇಶನ ಮಾಡಿದ್ದಾರೆ. 1.15 ನಿಮಿಷದ ನಾಟಕವು ಮಹಾತ್ಮ ಗಾಂಧೀಜಿಯವರ ಜೀವನದ ಮೇಲೆ ಬೆಳಕು ಚೆಲ್ಲಿತು.

ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನಾಟಕವನ್ನು ವಿದ್ಯಾರ್ಥಿನಿಯರು ಕಣ್ತುಂಬಿಕೊಂಡರು. ವರ್ಣಭೇದ ವ್ಯವಸ್ಥೆ, ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯವರು ವಹಿಸಿದ್ದ ಮಹತ್ತರ ಸನ್ನಿವೇಶಗಳನ್ನು ನೋಡಿ ವಿದ್ಯಾರ್ಥಿಗಳು ಬೆರಗಾದರು. ಚಪ್ಪಾಳೆ ಹೊಡೆದು ಕಲಾವಿದರ ಬೆನ್ನು ತಟ್ಟಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾವೈಕ್ಯತೆ ವೇದಿಕೆಯ ಸಹಭಾಗಿತ್ವದಲ್ಲಿ ನಾಟಕ ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !