ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಿರಂತರದ ಹೊಸ ನಾಟಕ ಕಾರ್ಯಾಗಾರ

Last Updated 17 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ರಂಗಭೂಮಿಯಲ್ಲಿ ನಿರಂತರವಾಗಿ ಹಲವು ಹೊಸ ಪ್ರಯೋಗಗಳನ್ನು ನೀಡುತ್ತಿರುವ ರಂಗನಿರಂತರ ಸಾಂಸ್ಕೃತಿಕ ಸಂಘಟನೆಯು ಹೊಸ ನಾಟಕ ಪ್ರಯೋಗಕ್ಕೆ ಸಜ್ಜಾಗುತ್ತಿದೆ. ದೇಶದಲ್ಲೇ ಹೆಸರು ಮಾಡಿರುವ ಪ್ರಖ್ಯಾತ ನಿರ್ದೇಶಕರು ನಾಟಕ ನಿರ್ದೇಶಿಸಲಿದ್ದಾರೆ.

ರಂಗನಿರಂತರವು ಸಿಜಿಕೆ ಎಂದೇ ಹೆಸರಾಗಿದ್ದ ಸಿ.ಜಿ.ಕೃಷ್ಣಸ್ವಾಮಿ ರವರ ಮೂಲಕ ಪ್ರಾರಂಭಗೊಂಡ ಸಂಸ್ಥೆ. ರಂಗ ಪ್ರಯೋಗ, ತರಬೇತಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸುವುದರೊಂದಿಗೆ ಕಳೆದ 5 ವರ್ಷಗಳಿಂದ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ ಕೂಡ ಆಯೋಜಿಸುತ್ತ ಬಂದಿದೆ. ರಂಗನಿರಂತರ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗುತ್ತಿದೆ.

ನಾಟಕಗಳಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವ ಯುವಕ-ಯುವತಿಯರನ್ನು ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳನ್ನು ರಂಗಭೂಮಿಗೆ ಪರಿಚಯಿಸಿ ಹೊಸ ಮೈಲಿಗಲ್ಲನ್ನು ಸೃಷ್ಟಿಸುವ ಉದ್ದೇಶದಿಂದ ಹೊಸಬರನ್ನು ಆಯ್ಕೆ ಮಾಡಲಾಗುತ್ತಿದೆ.

ನಾಟಕ ಪ್ರಯೋಗದ ಜೊತೆ ರಂಗ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಕಾರ್ಯಾಗಾರದ ನಿರ್ದೇಶಕರು. ಈ ಕಾರ್ಯಾಗಾರಕ್ಕೆ ಲಕ್ಷ್ಮಿಪತಿ ಕೋಲಾರ ನಾಟಕ ರಚನೆ ಮಾಡಿಕೊಡಲಿದ್ದಾರೆ. ಹಲವು ಪ್ರಕಾರಗಳ ನಿರ್ದೇಶಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಂಪರ್ಕ: ಕಿರಣ್ ಸಿಜಿಕೆ 9663574999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT