ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿ ಪಲ್ಲವಿ ಟ್ರ್ಯಾಕ್ಟರ್‌ ಚಲಾಯಿಸಿದ ಕಥೆ

Last Updated 5 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮಲಯಾಳದ ‘ಪ್ರೇಮಂ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಾಯಿ ಪಲ್ಲವಿ ಈಗ ಬಿಡುವಿಲ್ಲದ ನಟಿ. ಪಾತ್ರಗಳ ಆಯ್ಕೆಯಲ್ಲೂ ಆಕೆ ಸಾಕಷ್ಟು ಚ್ಯೂಸಿ. ದೊಡ್ಡ ಇಡುಗಂಟು ಸಿಗುತ್ತದೆಂದು ಅವರು ಜಾಹೀರಾತಿನ ಮೋಹಕ್ಕೂ ಸಿಲುಕಿದವರಲ್ಲ. ಜನರ ಮನದಲ್ಲಿ ಗಟ್ಟಿಯಾಗಿ ಉಳಿಯುವ ಪಾತ್ರಗಳ ಆಯ್ಕೆಯಲ್ಲಿ ಆಕೆ ಎತ್ತಿದ ಕೈ.

ಮಾಲಿವುಡ್‌ನಿಂದ ವೃತ್ತಿಬದುಕು ಆರಂಭಿಸಿದರೂ ತಮಿಳು ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ಆಕೆ ನಟಿಸಿದ್ದಾರೆ. ಟಾಲಿವುಡ್‌ನಲ್ಲಿ ಆಕೆ ನಟಿಸಿದ ಮೊದಲ ಚಿತ್ರ ‘ಫಿದಾ’. ರೊಮ್ಯಾಂಟಿಕ್‌ ಪ್ರೇಮಕಥೆಯ ಸುತ್ತ ಹೆಣೆದಿದ್ದ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಶೇಖರ್‌ ಕಮ್ಮುಲ. ವರುಣ್‌ ತೇಜ್ ಇದರಲ್ಲಿ ನಾಯಕರಾಗಿ ನಟಿಸಿದ್ದಾರೆ.

‘ಫಿದಾ’ ಚಿತ್ರದಲ್ಲಿ ಟ್ರ್ಯಾಕ್ಟರ್‌ ಚಲಾಯಿಸುವ ದೃಶ್ಯವೊಂದಿದೆ. ತೆರೆಯ ಮೇಲೆ ಈ ದೃಶ್ಯ ನೋಡಿದ ಪ್ರೇಕ್ಷಕರು ಸಾಯಿ ಪಲ್ಲವಿ ಅವರು ಟ್ರ್ಯಾಕ್ಟರ್‌ ಚಲಾಯಿಸುವುದನ್ನು ಕಲಿತಿದ್ದರೇ? ಎಂದು ಆ ವೇಳೆ ಪ್ರಶ್ನಿಸಿದ್ದು ಉಂಟು.

ಅವರ ಎಲ್ಲಾ ಪ್ರಶ್ನೆಗಳಿಗೆ ಈಗ ಆಕೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ. ‘ಫಿದಾ ಚಿತ್ರದಲ್ಲಿ ನಾನು ಟ್ರ್ಯಾಕ್ಟರ್‌ ಓಡಿಸಿದ್ದೆ. ಗಟ್ಟಿಯಾದ ನೆಲದಲ್ಲಿ ಟ್ರ್ಯಾಕ್ಟರ್‌ ಚಲಾಯಿಸುವಾಗ ಹಲವು ಬಾರಿ ಕಂಟ್ರೋಲ್‌ ತಪ್ಪಿದ್ದು ಉಂಟು. ಅದು ನನ್ನ ವೃತ್ತಿಬದುಕಿನ ಕಠಿಣ ಸವಾಲಾಗಿತ್ತು’ ಎಂದಿದ್ದಾರೆ.

ನಟನಾ ಸಾಮರ್ಥ್ಯ ಬೇಡುವ ಸಿನಿಮಾದಲ್ಲಿ ನಟಿಸುವುದೆಂದರೆ ಆಕೆಗೆ ಎಲ್ಲಿಲ್ಲದ ಖುಷಿ. ‘ಬಾಹುಬಲಿ’ ಖ್ಯಾತಿಯ ರಾನಾ ದಗ್ಗುಬಾಟಿ ನಾಯಕನಾಗಿರುವ ಹೊಸ ಚಿತ್ರ ‘ವಿರಾಟ ಪರ್ವಂ 1922’ ಚಿತ್ರಕ್ಕೂ ಅವರೇ ನಾಯಕಿ. ಇದರಲ್ಲಿ ಆಕೆಯದು ನಕ್ಸಲೈಟ್‌ ಪಾತ್ರವಂತೆ.

ನಾಗಚೈತನ್ಯ ನಟನೆಯ ‘ಲವ್‌ ಸ್ಟೋರಿ’ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೊರೊನಾ ಸೋಂಕಿನ ಭೀತಿಯಿಂದ ಈ ಸಿನಿಮಾದ ಬಿಡುಗಡೆಯ ದಿನಾಂಕವೂ ಮುಂದಕ್ಕೆ ಹೋಗಿದೆ. ಶೇಖರ್‌ ಕಮ್ಮುಲ ಅವರೇ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹಾಗಾಗಿ, ಈ ಎರಡು ಸಿನಿಮಾಗಳ ಮೇಲೆ ಆಕೆಗೆ ನಿರೀಕ್ಷೆ ಹೆಚ್ಚಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT