ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಸ್ಪರ್ಧೆ: ಸಮಷ್ಠಿ ಬೆಂಗಳೂರು ತಂಡದ 'ಕಂತು' ನಾಟಕ ಪ್ರಥಮ

41ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಫಲಿತಾಂಶ
Last Updated 17 ಜನವರಿ 2021, 13:26 IST
ಅಕ್ಷರ ಗಾತ್ರ

ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯಿಂದ ಆಯೋಜಿಸಿದ್ದ 41ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಸಮಷ್ಠಿ ಬೆಂಗಳೂರು ತಂಡದ ‘ಕಂತು’ ನಾಟಕ ಪ್ರಥಮ ಸ್ಥಾನ ಪಡೆದುಕೊಂಡಿದೆ.

ವಿಜೇತ ತಂಡಕ್ಕೆ ಪಿವಿಎಸ್ ಬೀಡೀಸ್ ಪ್ರಾಯೋಜಿತ ದಿ.ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ಬಹುಮಾನವಾಗಿ ₹ 35,000 ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಡಾ.ಟಿ.ಎಮ್.ಎ.ಪೈ ಸ್ಮಾರಕ ಪರ್ಯಾಯ ಫಲಕ ನೀಡಲಾಗುತ್ತಿದೆ. ಸಮಷ್ಠಿ ತಂಡ ಸತತ ಮೂರನೇ ಬಾರಿಗೆ ಪ್ರಶಸ್ತಿ ಪಡೆಯುತ್ತಿರುವುದು ವಿಶೇಷ ಎಂದು ಸಂಸ್ಥೆ ತಿಳಿಸಿದೆ.

ಸಮುದಾಯ ಧಾರವಾಡ ತಂಡದ ‘ತಲೆದಂಡ’ ನಾಟಕಕ್ಕೆ ದ್ವಿತೀಯ ಬಹುಮಾನ ದೊರೆತಿದ್ದು, ದಿ.ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ವರಾಜ್ ಕೊಡುಗೆಯಾಗಿ ₹ 25,000 ನಗದು, ಸ್ಮರಣಿಕೆ ಹಾಗೂ ಡಾ.ಆರ್.ಪಿ.ಕೊಪ್ಪೀಕರ್ ಸ್ಮಾರಕ ಬಹುಮಾನ ಸಿಗಲಿದೆ.

ಸುಮನಸ ಕೊಡವೂರು ಉಡುಪಿ ತಂಡದ ‘ನೆರಳಿಲ್ಲದ ಮನುಷ್ಯರು’ ನಾಟಕಕ್ಕೆ ತೃತೀಯ ಬಹುಮಾನ ದೊರೆತಿದ್ದು, ದಿ.ಪಿ.ವಾಸುದೇವ ರಾವ್ ಅವರ ಸ್ಮರಣಾರ್ಥ ಸೀತಾ ವಾಸುದೇವ ರಾವ್ ಅವರ ಕೊಡುಗೆಯಾಗಿ ₹ 15,000 ಹಾಗೂ ಸ್ಮರಣಿಕೆ ನೀಡಲಾಗುವುದು.

ಶ್ರೇಷ್ಠ ನಿರ್ದೇಶನ

ಸಮಷ್ಠಿ ಬೆಂಗಳೂರು ತಂಡದ ‘ಕಂತು’ ನಾಟಕದ ನಿರ್ದೇಶನಕ್ಕಾಗಿ ಮಂಜುನಾಥ ಎಲ್.ಬಡಿಗೇರ ಅವರನ್ನು ಶ್ರೇಷ್ಠ ನಿರ್ದೇಶನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಮುದಾಯದ ಧಾರವಾಡದ ‘ತಲೆದಂಡ’ ನಾಟಕದ ನಿರ್ದೇಶಕ ಮಹದೇವ ‌ಹಡಪದ ಅವರಿಗೆ ದ್ವಿತೀಯ, ಸುಮನಸಾ ಕೊಡವೂರು ತಂಡದ ನೆರಳಿಲ್ಲದ ಮನುಷ್ಯರು ನಾಟಕದ ನಿರ್ದೇಶಕ ಜೆ.ಜೋಸೆಫ್ ಅವರಿಗೆ ತೃತೀಯ ಪ್ರಶಸ್ತಿ ದೊರೆತಿದೆ.

ಶ್ರೇಷ್ಠ ನಟ

‘ತಲೆದಂಡ’ ನಾಟಕದ ‘ಬಿಜ್ಜಳ’ನ ಪಾತ್ರಧಾರಿ ಈರಣ್ಣ ಐನಾಪುರ ಶ್ರೇಷ್ಠ ನಟ ಪ್ರಶಸ್ತಿ ತನ್ನದಾಗಿಸಿಕೊಂಡರೆ, ‘ಕಂತು’ ನಾಟಕದ ಸದಾನಂದ ಮಾಸ್ತರ್ ಪಾತ್ರಧಾರಿ ಕೆ.ಪರಮೇಶ್ವರ್‌ಗೆ ದ್ವಿತೀಯ, ಕಂತು ನಾಟಕದ ‘ಪಾಂಡುರಂಗ ರಾಯ’ ಪಾತ್ರಧಾರಿ ಹರಿ ಸಮಷ್ಠಿಗೆ ತೃತೀಯ ಬಹುಮಾನ ಸಿಕ್ಕಿದೆ.

ಶ್ರೇಷ್ಠ ನಟಿ

ಕಂತು ನಾಟಕದ ‘ಕಾವೇರಿ’ ಪಾತ್ರಧಾರಿ ಸೌಮ್ಯಶ್ರೀ ಮಾರ್ನಾಡ್ ಶ್ರೇಷ್ಠ ನಟಿ ಗೌರವ ಪಡೆದರೆ, ‘ನೆರಳಿಲ್ಲದ ಮನುಷ್ಯರು’ ನಾಟಕದ ‘ಅಜಿತ’ಳ ಪಾತ್ರಧಾರಿ ರಾಧಿಕಾ ದಿವಾಕರ್ ದ್ವಿತೀಯ, ಕಂತು ನಾಟಕದ ‘ಸರಸ್ವತಿ/ಕಾತ್ಯಾಯಿನಿ’ ಪಾತ್ರಧಾರಿ ಕಿರಣ ತೃತೀಯ ಗೌರವ ದೊರೆತಿದೆ.

ಮೈಸೂರಿನ ಜಿಪಿಐಇಆರ್ ರಂಗತಂಡದ ‘ಮಂಟೇಸ್ವಾಮಿ ಕಥಾ ಪ್ರಸಂಗಕ್ಕೆ ಶ್ರೇಷ್ಠ ಸಂಗೀತ ಪ್ರಶಸ್ತಿ ದೊರೆತಿದ್ದು, ಸಮಷ್ಠಿ ತಂಡಕ್ಕೆ ದ್ವಿತೀಯ, ಸಮುದಾಯ ಧಾರವಾಡ ತಂಡಕ್ಕೆ ತೃತೀಯ ಗೌರವ ಸಿಕ್ಕಿದೆ.

ಶ್ರೇಷ್ಠ ರಂಗಸಜ್ಜಿಕೆ ಹಾಗೂ ರಂಗಪರಿಕರ ಪ್ರಶಸ್ತಿಯು ಸಮಷ್ಠಿ ತಂಡ (ಪ್ರಥಮ), ಸಮುದಾಯ ಧಾರವಾಡ ತಂಡ (ದ್ವಿತೀಯ), ಸುಮನಸ ಕೊಡವೂರು ತಂಡಕ್ಕೆ ತೃತೀಯ, ಶ್ರೇಷ್ಠ ಪ್ರಸಾಧನ ಪ್ರಶಸ್ತಿಯು ಸಮಷ್ಠಿ (ಪ್ರಥಮ), ಸಮುದಾಯ ಧಾರವಾಡ (ದ್ವಿತೀಯ), ಜಿಪಿಐಇಆರ್ ರಂಗ ತಂಡಕ್ಕೆ (ತೃತೀಯ), ಶ್ರೇಷ್ಠ ರಂಗ ಬೆಳಕು ಪ್ರಶಸ್ತಿ ಕಂತು ನಾಟಕ (ಪ್ರಥಮ), ನೆರಳಿಲ್ಲದ ಮನುಷ್ಯರು ನಾಟಕ (ದ್ವಿತೀಯ), ತಲೆದಂಡ ನಾಟಕಕ್ಕೆ (ತೃತೀಯ), ಶ್ರೇಷ್ಠ ಹಾಸ್ಯ ನಟನೆ ಪ್ರಶಸ್ತಿಯು ಕಂತು ನಾಟಕದ ಬುಗುರಿ ಪಾತ್ರಧಾರಿ ಹರೀಶ್ ರುದ್ರಯ್ಯಗೆ ದೊರೆತಿದೆ.

ಮೆಚ್ಚುಗೆ ಬಹುಮಾನಗಳು

ಕಂತು ನಾಟಕದ ತರ್ಕಶಾಸ್ತ್ರಿ ಪಾತ್ರಧಾರಿ ಶಿವಾನಂದ, ಮಂಟೇಸ್ವಾಮಿ ಕಥಾ ಪ್ರಸಂಗದ ಮಂಟೇಸ್ವಾಮಿ ಪಾತ್ರಧಾರಿ ನವೀನ್ ನೇತಾಜಿ, ನೆರಳಿಲ್ಲದ ಮನುಷ್ಯರು ನಾಟಕದ ‘ಕುಂಟಿಯಾ’ ಪಾತ್ರಧಾರಿ ದಿವಾಕರ್ ಕಟೀಲ್‌ಗೆ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT