ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಮೋಹದ ಜೀವ ಜೋಕಾಲಿ

theater
Last Updated 24 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಇಬ್ಬರಿಗೂ ಬಣ್ಣದ್ದೇ ಮೋಹವಿತ್ತು. ಒಬ್ಬರದು ಕ್ಯಾನ್ವಾಸ್‌ ಮತ್ತೊಬ್ಬರದು ಬೆಳ್ಳಿ ಪರದೆ. ಮೋಹಕ ತಾರಾ ಜೀವಗಳು ಜೋಡಿಯಾಗಿದ್ದು ಪ್ರೇಮಲೋಕದ ಒಂದು ಅದ್ಭುತ ಇತಿಹಾಸ. ಆ ಅಪ್ರತಿಮ ಜೋಡಿ ರೋರಿಕ್-ದೇವಿಕಾರಾಣಿ.

ಬೆಂಗಳೂರಿನಿಂದ ಕನಕಪುರ ಮಾರ್ಗದಲ್ಲಿ ತಾತಗುಣಿ ಎಸ್ಟೇಟನ್ನು ಸೀಳಿಕೊಂಡು ಒಂದು ರಸ್ತೆ ಸಾಗುತ್ತದೆ. ರಸ್ತೆಯ ಎಡ– ಬಲಕ್ಕೆ ತಾತಗುಣಿ ಬೋರ್ಡ್‌ ಕಾಣಿಸುತ್ತದೆ. ಕಳೆಗುಂದಿರುವಂತೆ ಕಾಣುವ ತಾಣ ಬಣ್ಣವನ್ನೇ ಉಸಿರಾಡಿದ ದೇವಿಕಾ– ರೋರಿಕ್‌ ನೆಮ್ಮದಿಯಿಂದ ಬದುಕಿದ ಸುಂದರ ವನವೂ ಆಗಿತ್ತು.

ದೇವಿಕಾ ರಾಣಿ ಭಾರತೀಯ ಚಿತ್ರರಂಗದ ಆದಿ ಮಹಾ ನಟಿ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮೊಟ್ಟಮೊದಲ ಬಾರಿಗೆ ತಮ್ಮ ಮುಡಿಗೆ ಏರಿಸಿಕೊಂಡವರು. ಅವರು ಹುಟ್ಟಿದ್ದು ಆಂಧ್ರಪ್ರದೇಶದ ವಿಶಾಖಪಟ್ಟಣ ಸಮೀಪದ ಒಂದು ಹಳ್ಳಿ.ರೋರಿಕ್ರಷ್ಯಾ ಮೂಲದ ಪ್ರಸಿದ್ಧ ಚಿತ್ರಕಲಾವಿದ. ಪರಸ್ಪರ ಮೆಚ್ಚಿ ಒಂದಾಗಿ ಬಾಳಿದವರು. ಜಗತ್ತನ್ನೇ ಸುತ್ತಿ ದೀರ್ಘಕಾಲ ಬೆಂಗಳೂರಿನಲ್ಲಿ ನೆಲೆಸಿದವರು. ಅವರಿಬ್ಬರ ದಾಂಪತ್ಯ ಮತ್ತು ಕ್ರಿಯಾಶೀಲ ಬದುಕು ಈಗ ರಂಗದಮೇಲೆ ರಂಗೇರುತ್ತಿದೆ.
‘ರೋರಿಕ್-ದೇವಿಕಾ, ಬಣ್ಣ ಮೆಚ್ಚಿದವರು’ ಎಂಬ ರಂಗ ಪ್ರಯೋಗವನ್ನು ಹನುಮಂತನಗರದ ಪ್ರಭಾತ್‌ ಕೆ.ಎಚ್‌. ಕಲಾಸೌಧದಲ್ಲಿ‘ಸಂಚಾರಿ ಥಿಯೇಟರ್’ ಪ್ರಸ್ತುತ ಪಡಿಸಲಿದೆ.

ಸಂಚಾರಿ ಥಿಯೇಟರ್: ಬೆಂಗಳೂರು ಮೂಲದ ರಂಗಸಂಸ್ಥೆ. ನಾಟಕ ಪ್ರದರ್ಶನ, ಅಭಿನಯ ಕಾರ್ಯಾಗಾರ, ನೇಪಥ್ಯ ಹಾಗೂ ರಂಗಸಂಗೀತ ಕುರಿತ ಶಿಬಿರಗಳನ್ನು ನಡೆಸುತ್ತದೆ. ಇದು ಮಕ್ಕಳ ರಂಗಭೂಮಿ ಕುರಿತಂತೆ ನಿರಂತರ ಅನುಸಂಧಾನ ಮಾಡುತ್ತಿದೆ.

ರೋರಿಕ್ ದೇವಿಕಾ‘ ಬಣ್ಣ ಮೆಚ್ಚಿದವರು ನಾಟಕ ಪ್ರದರ್ಶನ: ರಚನೆ– ಡಾ.ನಟರಾಜ ತಲಘಟ್ಟಪುರ, ನಿರ್ದೇಶನ– ಎನ್‌. ಮಂಗಳಾ. ಅತಿಥಿಗಳು–ಕೆ. ಮರುಳಸಿದ್ದಪ್ಪ, ಎಂ.ಎಸ್. ಉಮೇಶ್ ಸ್ಥಳ: ಪ್ರಭಾತ್‌ ಕೆ.ಎಚ್. ಕಲಾಸೌಧ, ಹನುಮಂತನಗರ. ಏಪ್ರಿಲ್‌ 25, ಸಂಜೆ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT