ಅರಕಲಗೂಡು: ‘ನಾಟಕದ ಮೂಲಕ ಒಳ್ಳೆಯದು, ಕೆಟ್ಟದ್ದು ಯಾವುದು ಎಂದು ತೋರಿಸಲಾಗುತ್ತದೆ. ಜೀವನದಲ್ಲಿ ನೀತಿ ಪಾಠ ಹೇಳುವ ನಾಟಕ ಕಲೆಗೆ ಸಾವಿಲ್ಲ’ ಎಂದು ಶಾಸಕ ಎ.ಮಂಜು ತಿಳಿಸಿದರು.

ತಾಲ್ಲೂಕಿನ ವೇಣುಗೋಪಾಲ ಕೃಪಾಪೋಷಿತ ನಾಟಕ ಮಂಡಳಿ ಕ್ರೀಡಾಂಗಣದಲ್ಲಿ ಹಾಕಿದ್ದ ಹೊಳೆನರಸೀಪುರ ಮಾರುತಿ ಡ್ರಾಮಾ ಸೀನ್ಸ್ ರಂಗವೇದಿಕೆಯಲ್ಲಿ ಹಾರ್ಮೊನಿಯಂ ಮಾಸ್ಟರ್ ಜಿ.ಜಿ.ಕೇಶವ, ಗರೀಘಟ್ಟ ನಿರ್ದೇಶನದಲ್ಲಿ ಪ್ರದರ್ಶಿತ ಕುರುಕ್ಷೇತ್ರ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಕೂಡ ನಾಟಕದಲ್ಲಿ ಭೀಮ, ಘಟೋತ್ಗಜನ ಪಾತ್ರಗಳನ್ನು ನಿರ್ವಹಿಸಿದ್ದು, ಮಹಾಭಾರತ, ರಾಮಾಯಣ ಗ್ರಂಥಗಳು ನಮ್ಮ ಧಾರ್ಮಿಕ ಗ್ರಂಥಗಳು. ನಾಟಕದಿಂದ ಲಾಭ ಇರುವುದು ಸೀನ್ಸ್ನವರಿಗೆ, ಹಾರ್ಮೋನಿಯಂ ಮಾಸ್ಟರಿಗೆ, ವರ್ಷಕ್ಕೆ ಮೂರು ನಾಟಕ ಮೇಷ್ಟ್ರಿಗೆ ಸಿಗಬಹುದು ಅಷ್ಟೆ, ನೀವೇ ಕಲಾವಿದರು ಡ್ರೆಸ್ನಲ್ಲಿ ನಾಟಕ ದೃಶ್ಯಾವಳಿಯ ವಿಡಿಯೋ ಮಾಡಿ ಕಳಿಸಿ, ಅದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡೋಣ’ ಎಂದು ಭರವಸೆ ನೀಡಿದರು.

ಕದಂಬ ಸೈನ್ಯದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಎ.ಎಚ್. ಗಣೇಶ್ ಅಂಕಪುರ ಮಾತನಾಡಿ, ‘ಭಾರತೀಯ ಸಾಂಸ್ಕೃತಿಕ ಪರಂಪರೆ ಆರಂಭವಾಗುವುದೇ ಮಹಾಭಾರತ, ರಾಮಾಯಣ ಮಹಾಕಾವ್ಯಗಳಿಂದ. ಧರ್ಮಕ್ಕೆ ಜಯ ಎಂಬುದನ್ನು ಕುರುಕ್ಷೇತ್ರ ನಾಟಕ ಪ್ರತಿಫಲಿಸುತ್ತದೆ’ ಎಂದು ವಿಶ್ಲೇಷಿಸಿದರು.

ಬರಹಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುಂದರೇಶ್ ಉಡುವಾರೆ, ಶಿಕ್ಷಕ ಪಿ.ನಂದಕುಮಾರ್, ರಂಗ ನಿರ್ದೇಶಕ ರಮೇಶ್ ಭಾಗವತ್ ಮಾತನಾಡಿದರು. ನಿರ್ದೇಶಕ ಎಂ.ಪಿ. ಪದ್ಮರಾಜ್, ಕಲಾವಿದರಾದ ಪುಟ್ಟಸ್ವಾಮಿಗೌಡ, ಬೇಕರಿ ರಾಜೇಗೌಡ, ಸಿಗರನಹಳ್ಳಿ ಚಂದ್ರಶೇಖರ್ ವೇದಿಕೆಯಲ್ಲಿದ್ದರು.

ನಾಟಕದ ಸೂತ್ರಧಾರಿ ಪಾತ್ರದಲ್ಲಿ ಜಿ.ಜಿ.ರವಿ, 1ನೇ ದುರ್ಯೋಧನ– ಈರಣ್ಣ, 2ನೇ ದುರ್ಯೋಧನ ರವಿಕುಮಾರ, 1ನೇ ಕೃಷ್ಣ ಗಣೇಶ್ ವೇಲಾಪುರ, 2ನೇ ಕೃಷ್ಣ ರವಿಕುಮಾರ ಎಂ.ಜೆ., ಧರ್ಮರಾಯ– ಸ್ವಾಮಿ ದೇವರಹಳ್ಳಿ, ಭೀಮ–ನಾಗರಾಜ್, 1ನೇ ಅರ್ಜುನ–ದೇವರಾಜ್ ಎಂ.ಜೆ., 2ನೇ ಅರ್ಜುನ– ಕಾಂತರಾಜ್, ಕರ್ಣ– ಚನ್ನಯ್ಯ ಆರ್.ಪಿ., ಅಭಿಮನ್ಯು– ವೆಂಕಟೇಶ್, ವಿಧುರ– ಕುಮಾರ್ ಎಂ.ಆರ್., ದುಶ್ಯಾಸನ– ಸ್ವಾಮಿ ಮೋಕಲಿ, ಶಕುನಿ– ಚಿತ್ರಶೇಖರ, ಭೀಷ್ಮ– ನಾಗರಾಜ್ ತಟ್ಟೇಕೆರೆ, ದ್ರೋಣ– ಸ್ವಾಮಿ ಚೋಳೇನಹಳ್ಳಿ, ಸೈಂಧವ– ರಂಗಸ್ವಾಮಿ, ಧೃತರಾಷ್ಟ್ರ ಧರ್ಮ ಜಿ. ಮತ್ತು ಶಲ್ಯನ ಪಾತ್ರದಲ್ಲಿ ಬಾಲಕ ಅಜಯ್ ಪ್ರಸಾದ್ ನಟಿಸಿದರು. ಜಿ.ಜಿ.ಕೇಶವ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-36-115126941

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.