ಬೆಳಗಾವಿ: ಇಲ್ಲಿಯ ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆಯ ಕಲಾವಿದರು ಮಂಗಳವಾರ ಪ್ರಸ್ತುತಪಡಿಸಿದ ‘ಸೆಕೆಂಡ್ ಹ್ಯಾಂಡ್ ಸದಾಶಿವ’ ನಾಟಕ ಪ್ರದರ್ಶನದುದ್ದಕ್ಕೂ ಪ್ರೇಕ್ಷಕರನ್ನು ನಕ್ಕು, ನಗಿಸುವ ಮೂಲಕ ಯಶಸ್ವಿ ಪ್ರಯೋಗವೆನಿಸಿತು.

ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಸುಮಾರು 50 ನಿಮಿಷಗಳ ನಾಟಕ ಆರಂಭದಿಂದ ಅಂತ್ಯದವರೆಗೂ ನಿರಂತರ ನಗಿಸುವ ಮೂಲಕ ಪ್ರೇಕ್ಷಕರನ್ನು ಕದಲದಂತೆ ಮಾಡಿತು.

ಎಂ. ಎಸ್. ನರಸಿಂಹಮೂರ್ತಿ ರಚಿಸಿರುವ ಈ ನಾಟಕವನ್ನು ಶರಣಗೌಡ ಪಾಟೀಲ ಅವರು ನಿರ್ದೇಶಿಸಿ, ಸಂಗೀತ ನಿರ್ದೇಶನ, ರಂಗವಿನ್ಯಾಸ ಮತ್ತು ಬೆಳಕಿನ ವಿನ್ಯಾಸವನ್ನೂ ಮಾಡಿದ್ದಾರೆ. ವಾಮನ ಮಳಗಿ ಸದಾಶಿವನಾಗಿ, ಶಾಂತಾ ಆಚಾರ್ಯ ಇಂದ್ರಾಣಿಯಾಗಿ, ಶಿರೀಶ್ ಜೋಶಿ ಪಾಪಣ್ಣನಾಗಿ, ವಿಶ್ವನಾಥ ದೇಸಾಯಿ ಬಾಸ್ ಬಾಲರಾಜ ಆಗಿ, ಅನುಶ್ರೀ ರಘುವೀರ ಊದಬತ್ತಿ ಉರ್ಮಿಳೆಯಾಗಿ, ಶರಣಯ್ಯ ಮಠಪತಿ ಮೋಹನನಾಗಿ ಮನೋಜ್ಞವಾಗಿ ಅಭಿನಯಿಸಿದರು. ಗುರು ದತ್ತ ಪೆಡ್ನೆಕರ್ ನೆಳಲು- ಬೆಳಕಿನ ವಿನ್ಯಾಸ ನೀಡಿದರು.

ಲೋಕೋಪಯೋಗಿ ಇಲಾ ಖೆ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ ಹುಲಜಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಸೇವಕರಾದ ಬಸವರಾಜ ಕಾಮನಗೌಡರ, ಉದ್ಯಮಿ ಪುಂಡಲೀಕ ಅತಿಥಿಗಳಾಗಿ ಪಾಲ್ಗೊಂಡರು. ರಂಗಸೃಷ್ಟಿ ನಿರ್ದೇಶಕ ರಾಮಕೃಷ್ಣ ಮರಾಠೆ ಪ್ರಾಸ್ತಾವಿಕ ಮಾತನಾಡಿದರು. ಶರಣಯ್ಯ ಮಠಪತಿ ನಿರೂಪಿಸಿದರು. ಅಧ್ಯಕ್ಷತೆಯನ್ನು ರಂಗಸೃಷ್ಟಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಮೇಶ ಜಂಗಲ ವಹಿಸಿದ್ದರು.

ಉಪಾಧ್ಯಕ್ಷರಾದ ಎಂ.ಕೆ.ಹೆಗಡೆ, ಶೈಲಜಾ ಭಿಂಗೆ, ಹಿರಿಯ ರಂಗಕರ್ಮಿ ಬಿ.ಎಸ್.ಗವಿಮಠ, ಕನ್ನಡಭವನದ ಕಾರ್ಯದರ್ಶಿ ಯ.ರು.ಪಾಟೀಲ ಉಪಸ್ಥಿತರಿದ್ದರು. ಪ್ರಸಾದ ಪಂಡಿತ, ಬಿ.ಎಸ್.ಗವಿಮಠ, ಶಶಿಧರ ಹೊಸಕೋಟೆ ನಾಟಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-21-1386460069

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.