ಬೆಂಗಳೂರು: ರಂಗಕರ್ಮಿ, ನಟ ಮಾಸ್ಟರ್ ಹಿರಣ್ಣಯ್ಯ ಅವರ ಸ್ಮರಣಾರ್ಥ ಬನಶಂಕರಿಯಲ್ಲಿರುವ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ತನ್ನ ಕೇಂದ್ರದಲ್ಲಿ ಇದೇ 16ರಿಂದ 19ರವರೆಗೆ ‘ಸುಚಿತ್ರಾ ಹಿರಣ್ಣಯ್ಯ ನಾಟಕೋತ್ಸವ’ ಹಮ್ಮಿಕೊಂಡಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಆನಂದ ಸಭಾಪತಿ, ‘ಮಾಸ್ಟರ್ ಹಿರಣ್ಣಯ್ಯ ಅವರ ಕುಟುಂಬದವರ ಬೆಂಬಲದಿಂದ ಈ ನಾಟಕೋತ್ಸವ ಮಾಡಲಾಗುತ್ತಿದೆ. ನಾಟಕಗಳ ಪ್ರದರ್ಶನದ ಜತೆಗೆ, ರಂಗಭೂಮಿಗೆ ಸಂಬಂಧಿಸಿದ ಕಾರ್ಯಾಗಾರ, ಮಾಸ್ಟರ್ ಕ್ಲಾಸ್, ಜನಪದ ನೃತ್ಯವನ್ನು ಈ ನಾಟಕೋತ್ಸವ ಒಳಗೊಂಡಿದೆ. ಹಿರಣ್ಣಯ್ಯ ಅವರು ಕನ್ನಡ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದು, ಅವರು ಇಂದಿನ ತಲೆಮಾರಿಗೆ ಸ್ಫೂರ್ತಿಯಾಗಿದ್ದಾರೆ. ಈ ಉತ್ಸವವು ರಂಗಭೂಮಿ, ಸಂಪ್ರದಾಯ ಮತ್ತು ಸಮಕಾಲೀನ ಕಲಾತ್ಮಕ ಅಭಿವ್ಯಕ್ತಿಗಳ ಅದ್ಭುತ ಸಂಗಮವಾಗಲಿದೆ. ಯುವ ಪ್ರತಿಭೆಗಳು, ಅನುಭವಿ ಕಲಾವಿದರು ಹಾಗೂ ರಂಗಾಸಕ್ತರನ್ನು ಒಂದೇ ವೇದಿಕೆಯಡಿ ತರುವ ಉದ್ದೇಶ ಹೊಂದಿದೆ’ ಎಂದರು.

‘ನಾಲ್ಕೂ ದಿನ ಬೆಳಿಗ್ಗೆ 10 ಗಂಟೆಯಿಂದ ಕಾರ್ಯಾಗಾರ ಪ್ರಾರಂಭವಾಗಲಿದೆ. ರಂಗ ಕಲೆಯಲ್ಲಿ ಆಸಕ್ತಿ ಇರುವವರು ಹೆಸರು ನೋಂದಾಯಿಸಿಕೊಂಡು ಪಾಲ್ಗೊಳ್ಳಬಹುದಾಗಿದೆ. ಸಂಜೆ 4.30ರಿಂದ ಮಾಸ್ಟರ್ ಕ್ಲಾಸ್ಗಳು ನಡೆಯಲಿದ್ದು, ಸಿಂಧು ಶ್ರೀನಿವಾಸಮೂರ್ತಿ, ಬಾಬು ಹಿರಣ್ಣಯ್ಯ, ಪವನ್ ಕುಮಾರ್, ಬಾಲಾಜಿ ಮನೋಹರ್ ಭಾಗವಹಿಸುತ್ತಾರೆ. ಉತ್ಸವದ ಮೊದಲ ದಿನ ಸಂಜೆ 6.15ರಿಂದ ಜನಪದ ನೃತ್ಯ ಹಮ್ಮಿಕೊಳ್ಳಲಾಗಿದ್ದು, ಉಳಿದ ದಿನ ಬೀದಿ ನಾಟಕಗಳು ನಡೆಯಲಿವೆ’ ಎಂದು ಹೇಳಿದರು.

‘ಈ ಉತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಲಿದ್ದಾರೆ. ದಕ್ಷತರಂಗ ತಂಡದಿಂದ ‘ಜ್ಞಾನಪರ್ವ’, ರಂಗ ಚೈತನ್ಯ ತಂಡದಿಂದ ‘ಸೇವಂತಿ ಪ್ರಸಂಗ’, ರಂಗ ಸಾಂಗತ್ಯ ತಂಡದಿಂದ ‘ಅಭಿಯಾನ’ ಹಾಗೂ ಚಿಗುರು ಕಲಾ ತಂಡದಿಂದ ‘ಮಹೋರ್ಣ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಂಜೆ 7 ಗಂಟೆಯಿಂದ ನಾಟಕಗಳ ಪ್ರದರ್ಶನ ನಡೆಯಲಿದ್ದು, ಟಿಕೆಟ್ಗಳು ಸ್ಥಳದಲ್ಲಿಯೇ ದೊರೆಯಲಿವೆ. ದೂರವಾಣಿ ಸಂಖ್ಯೆಗೆ ಕರೆ ಮಾಡಿಯೂ ಪಡೆಯಬಹುದು’ ಎಂದು ವಿವರಿಸಿದರು.

ಅಕಾಡೆಮಿಯ ಟ್ರಸ್ಟಿಗಳಾದ ಕೃಷ್ಣ ಹೆಬ್ಬಾಳೆ, ಶಶಿಧರ್, ಕೃಷ್ಣನ್ ರಂಗರಾಜು, ಖಜಾಂಚಿ ಅಭಿಷೇಕ್ ಅಯ್ಯಂಗಾರ ಹಾಗೂ ಮಾಸ್ಟರ್ ಹಿರಣ್ಣಯ್ಯ ಅವರ ಪುತ್ರರೂ ಆಗಿರುವ ಕಲಾವಿದ ಬಾಬು ಹಿರಣ್ಣಯ್ಯ ಉಪಸ್ಥಿತರಿದ್ದರು.

ಸಂಪರ್ಕಕ್ಕೆ: 88842 01072 ಅಥವಾ 95353 22196

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-4-1117098342

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.