ಬೀದರ್: ಜನಜನಿತ ಕಲಾ ಪ್ರದರ್ಶನ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದಲ್ಲಿ ಉಚಿತ ಅಭಿನಯ ರಂಗ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರವು ಮೇ 2ರಿಂದ ಆರಂಭವಾಗಲಿದ್ದು, ಆಸಕ್ತ ಯುವಕ-ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ. ಶಿಬಿರವು ಚಲನಚಿತ್ರ ನಟ ಯಶವಂತ ಕುಚಬಾಳ ಅವರ ನೇತೃತ್ವದಲ್ಲಿ ನಡೆಯಲಿದ್ದು, ರಾಘವೇಂದ್ರ ಹಳಿಪೇಟ್, ಅರುಣ್ ಮಾನ್ವಿ, ವಿಶಾಲ್ ಪಾಟೀಲ್ ಹಾಗೂ ಸ್ನೇಹಾ ಅವರು ಅಭಿನಯ ತರಬೇತಿಯನ್ನು ನೀಡಲಿದ್ದಾರೆ.

ಈ ಅಭಿನಯ ರಂಗ ಶಿಬಿರವು ನಗರದ ಶಾಹಪೂರ ಗೇಟ್ ರೋಡ, ನ್ಯಾಷನಲ್ ಮಾರ್ಕೆಟ್ ಹಿಂಭಾಗದ ರವೀಂದ್ರ ಶಾಲೆಯ ಬಳಿ ಜರುಗಲಿದೆ. ಅಭಿನಯದಲ್ಲಿ ಆಸಕ್ತಿ ಹೊಂದಿರುವವರು ತಕ್ಷಣವೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಎಸ್. ಬಿ. ಕುಚಬಾಳ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-33-1666736332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.