ಬೀಳಗಿ: ಬಹುಮಾಧ್ಯಮಗಳ ಮೂಲಕ ಮನರಂಜನೆ ದೊರೆಯುತ್ತಿರುವದರಿಂದ ಇಂದು ನಾಟಕದಂತಹ ರಂಗಕಲೆಗಳತ್ತ ರಸಿಕ ಜನತೆ ಆಗಮಿಸುತ್ತಿಲ್ಲವೆಂದು ರಂಗಕರ್ಮಿ ಸುಶೀಲೇಂದ್ರಾಚಾರ್ಯ ಕುಂದರಗಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕುಂದರಗಿಯ ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ದುರ್ಗಾದೇವಿ ಯುವಕ ಮಂಡಳ ಹಾಗೂ ಲಕ್ಕಿ ಗಜಾನನ ಮಂಡಳ ಸೇರಿದಂತೆ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ಲಕ್ಷ್ಮೇಶ್ವರದ ಜೈ ಮಾತೃಭೂಮಿ ಕಲಾ ಸಂಘದಿಂದ ಪ್ರಸ್ತುತ ಪಡಿಸಿದ ‘ದುಡ್ಡು ದಾರಿ ಬಿಡಿಸಿತು’ ಎಂಬ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬೀಳಗಿ ತಾಲ್ಲೂಕು ಅಮೀರಬಾಯಿ ಕರ್ನಾಟಕಿ, ಗೋಹರಜಾನ್, ಮಧ್ವರಾಜ ಉಮ್ಮರ್ಜಿ ಅಲ್ಲದೇ ಕಂದಗಲ್ ಹನುಮಂತರಾಯರನ್ನು ನೀಡಿದ ಭೂಮಿ. ಅಲ್ಲದೇ ಕುಂದರಗಿಯಲ್ಲಿಯೂ ಗುಬ್ಬೀ ವೀರಣ್ಣನವರ ನಾಟಕ ಕಂಪನಿಯಲ್ಲಿಯೇ ಸತತ 12 ವರ್ಷ ನಟನೆ ಮಾಡಿರುವ ಹನುಮಂತಗೌಡ ಸನಗೌಡರ ಅವರೂ ತಮ್ಮ ಜೀವನವನ್ನೇ ನಾಟಕ ಪ್ರಯೋಗಕ್ಕೆ ಮೀಸಲಿಟ್ಟಿದ್ದರು ಎಂದರು.

ರಂಗಕಲೆಗಳು ಉಳಿಯಬೇಕಾದರೆ ಮೊದಲು ಕಲಾವಿದರಲ್ಲಿ ಶಿಸ್ತು ಮೂಡಬೇಕಿದೆ. ತಮ್ಮ ಕಲೆಯ ಬಗ್ಗೆ ಕೀಳರಿಮೆಪಡದೇ ಆರೋಗ್ಯಕರವಾದ ವಿಚಾರಗಳನ್ನು ಇಟ್ಟುಕೊಂಡು ಸಾಗಬೇಕಿದೆ. ಅಂದಾಗ ಸಾಮಾಜಿಕ ದೃಷ್ಟಿಕೋನವೂ ಬದಲಾಗುತ್ತದೆ ಎಂದು ತಿಳಿಸಿದರು.

ನಂತರ ರೇವಣ್ಣ ಲಕ್ಷ್ಮೇಶ್ವರ ನೇತೃತ್ವದಲ್ಲಿ ನಾಟಕ ಪ್ರದರ್ಶನಗೊಂಡಿತು.

ಶಿವಾನಂದ ನಿರಾಕಾರಿ, ಶಂಕರ ಖೋತ, ರಾಜುಗೌಡ ಪಾಟೀಲ, ಗಿರಿಯಪ್ಪ ಕಟಗಿ, ರಾಮಣ್ಣ ಯಡಹಳ್ಳಿ, ಬಸಯ್ಯ ಓಣಿ, ಶ್ರೀಪಾದ ಯಾದವಾಡ, ತಿಪ್ಪಣ್ಣ ಪೂಜೇರ ಇದ್ದರು.

ಅಶೋಕ ಕಟ್ಟೆಪ್ಪನವರ ಸ್ವಾಗತಿಸಿದರು. ಬಸವರಾಜ ನಿರಾಕಾರಿ ನಿರೂಪಿಸಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-19-1354544797

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.