ಬೈಂದೂರು: ದಿ. ಕೂರಾಡಿ ಸೀತಾರಾಮ ಶೆಟ್ಟಿ ಸ್ಮರಣಾರ್ಥ ಲಾವಣ್ಯ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಸಿದ್ಧಗೊಂಡ ನಾಟಕ ಪ್ರದರ್ಶನ ಇಲ್ಲಿನ ಶಾರದಾ ವೇದಿಕೆಯಲ್ಲಿ ಈಚೆಗೆ ನಡೆಯಿತು.

ಭಗವದ್ಗೀತಾ ಅಭಿಯಾನದ ಜಿಲ್ಲಾ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್ ಮಾತನಾಡಿ ಮಕ್ಕಳಿಗೆ ರಂಗಭೂಮಿ ಉಳಿಸಿ ಬೆಳೆಸಲು ಹಲವು ವರ್ಷಗಳಿಂದ ಮಕ್ಕಳ ರಂಗತರಬೇತಿ ಶಿಬಿರ ಏರ್ಪಡಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ನಾಟಕ ನಿರ್ದೇಶಕ ಬಿ. ಗಣೇಶ ಕಾರಂತ ಹಾಗೂ ರೋಷನ್ ಕುಮಾರ್ ಅವರನ್ನು ಗೌರವಿಸಲಾಯಿತು. ಲಾವಣ್ಯದ ಗೌರವಾಧ್ಯಕ್ಷ ಬಾಲಚಂದ್ರ ವಿ.ಆರ್. ಉದ್ಘಾಟಿಸಿದರು. ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ಉದ್ಯಮಿ ರಾಜೇಂದ್ರ ಹೆಜ್ಜಾಲು ಪಾಲ್ಗೊಂಡಿದ್ದರು.

ಮೂರ್ತಿ ಪಡುವರಿ ಪ್ರಾರ್ಥಿಸಿದರು. ವ್ಯವಸ್ಥಾಪಕ ಬಿ. ಗಣೇಶ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯಪ್ರಸನ್ನ ವಂದಿಸಿದರು. ಶಿಕ್ಷಕ ರಾಜೇಶ್ ನಾಯ್ಕ್ ನಿರೂಪಿಸಿದರು. 33 ಶಿಬಿರಾರ್ಥಿಗಳು ಶಶಿರಾಜ್ ಕಾವೂರು ರಚನೆಯ ‘ಮಿನುಗಲೆ ಮಿನುಗಲೆ ನಕ್ಷತ್ರ ನಾಟಕ ಪ್ರಸ್ತುತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-28-951348378

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.