ಚನ್ನರಾಯಪಟ್ಟಣ: ಪಟ್ಟಣದ ಸಾಹಿತಿ, ಕಲಾವಿದ ಚಂದ್ರು ಕಾಳೇನಹಳ್ಳಿ ರಚಿಸಿದ ಗಂಧವತಿ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2024ರ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

‘ಗಂಧವತಿ’ ನಾಟಕ ಹೊಯ್ಸಳರ ಅರಸ ವಿಷ್ಣುವರ್ಧನ ಮತ್ತು ಶಾಂತಲೆಯ ಜೀವನಾಧರಿತ ನಾಟಕವಾಗಿದೆ. 10ನೇ ಶತಮಾನದಲ್ಲಿನ ಕೋಮು ಸಾಮರಸ್ಯವನ್ನು ನಾಟಕದಲ್ಲಿ ಬಿಂಬಿಸಲಾಗಿದೆ. ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಹಾಗೂ ಜನಪದರಂಗ ಮಾಧ್ಯಮದ ಅಧ್ಯಕ್ಷರು ಆಗಿರುವ ಚಂದ್ರು ಕಾಳೇನಹಳ್ಳಿ, ಈವರೆಗೆ 10 ನಾಟಕಗಳನ್ನು ರಚಿಸಿದ್ದಾರೆ.

ಜಾನಪದ ಕ್ಷೇತ್ರದಲ್ಲಿ ಸೋಲಿಗರ ಸಂಸ್ಕೃತಿ ಸಂಶೋಧನಾ ಪ್ರಬಂಧ, ಜಾನಪದ ಪ್ರವೇಶ ಮತ್ತು ನಗರ ಜಾನಪದ ಕೃತಿ ರಚಿಸಿದ್ದಾರೆ. ಮೂಡಲಪಾಯದ ಪುನಶ್ಚೇತನಕ್ಕೆ ಒತ್ತು ನೀಡಲಾಗಿದ್ದು, ಈಗಾಗಲೇ ಹಲವು ಕಡೆ ಭೀಮಾರ್ಜುನ ಕಾಳಗ ಯಕ್ಷಗಾನವನ್ನು ಇವರ ನೇತೃತ್ವದಲ್ಲಿ ಕಲಾವಿದರು ಪ್ರದರ್ಶಿಸಿದ್ದಾರೆ.

‘ಬುಧವಾರ ಸಂಜೆ ಇಲಾಖೆಯ ಅಧಿಕಾರಿಗಳು ದೂರವಾಣಿ ಕರೆಮಾಡಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ವಿಚಾರ ತಿಳಿಸಿದಾಗ ಸಂತಸವಾಯಿತು. ಈ ಕ್ಷೇತ್ರದಲ್ಲಿ ಇನ್ನು ಸಾಧನೆ ಮಾಡಲು ಪ್ರಶಸ್ತಿ ಪ್ರೇರಣೆ ನೀಡಿದೆ. ಹೊಯಳ್ಸರ ಸಾಮ್ರಾಜ್ಯ ಕುರಿತು ಇನ್ನೊಂದು ಕೃತಿ ರಚಿಸಲಾಗುವುದು’ ಎಂದು ಚಂದ್ರು ಕಾಳೇನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-36-1475531719

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.