ಚಿಕ್ಕಬಳ್ಳಾಪುರ: ನಗರದ ಕನ್ನಡ ಭವನದಲ್ಲಿ ಮಾರ್ಚ್ 26ರಂದು ಮಹಾಡ್ ಕೆರೆಯ ನೀರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಟ್ಟಿದ 100ನೇ ವರ್ಷದ ನೆನಪಿಗಾಗಿ ಕೋಲಾರದ ಏಳು ಹೆಜ್ಜೆಗಳ ರಂಗ ಪಯಣ ‘ಬುಡ್ಡಿದೀಪ’ದಿಂದ ‘ಅಂಬೇಡ್ಕರ್ ಕೊಲಾಜ್’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಪತ್ರಿಕೆಗಳು, ನಾಟಕಗಳು ಅವಸಾನದ ಅಂಚಿಗೆ ತಲುಪಿವೆ. ಇಂತಹ ಸಮಯದಲ್ಲಿ ಎರಡು ಗಂಟೆ ನೋಡುವ ಮತ್ತು ಕೇಳುವ ಸಾಮರ್ಥ್ಯವನ್ನು ಜನರು ಬೆಳೆಸಿಕೊಂಡರೆ ಉತ್ತಮ ಎಂಬ ಉದ್ದೇಶದೊಂದಿಗೆ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದರು.

ಈ ನೆಲದ ಮಣ್ಣಿನ ಮಹತ್ವ ತಿಳಿಸುವ ನಾಟಕ ಪ್ರದರ್ಶಿಸಲಾಗುತ್ತಿದೆ. 26ಕ್ಕೆ ಚಿಕ್ಕಬಳ್ಳಾಪುರ, 27ಕ್ಕೆ ಕೋಲಾರ, 28ಕ್ಕೆ ಹೊಸಕೋಟೆಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಹಲವು ಸ್ಥರಗಳಲ್ಲಿ ಅಧಃಪತನಗೊಂಡ ಭಾರತವನ್ನು ಈ ನಾಟಕ ತೆರಪಿ ಮಾಡುತ್ತದೆ. ಮೌಲ್ಯವನ್ನು ಎತ್ತಿಹಿಡಿಯಬೇಕು. ಇದು ಕಲಾವಿದನ ಕರ್ತವ್ಯ. ಮಗುವಿನಿಂದ ಹಿಡಿದು ಎಲ್ಲ ವಯೋಮಾನ ಮತ್ತು ವರ್ಗದ ಜನರ ಮೇಲೆ ನಾಟಕವು ಪ್ರಭಾವ ಬೀರುತ್ತದೆ. ಈಗಾಗಲೇ ಪ್ರದರ್ಶನಗೊಂಡ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಹೇಳಿದರು.

ಈ ನೆಲದ ಮಣ್ಣಿನ ಬಗ್ಗೆ ತಿಳಿಯಲು, ದಮನಿತ ಸಮುದಾಯಗಳ ಸಂಕಷ್ಟಗಳ ಬಗ್ಗೆ ತಿಳಿಯಲು ಈ ನಾಟಕ ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ ರಾಜಾಕಾಂತ್ ಮಾತನಾಡಿ, ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಅವರ ವಿಚಾರಗಳನ್ನು ಹಿಡಿದು ಮುನ್ನಡೆಯಬೇಕು ಎಂದರು.

ರಾಜಕೀಯ ವ್ಯಾಪಾರೀಕರಣವಾಗುತ್ತಿದೆ. ವ್ಯವಸ್ಥೆ ಕೆಟ್ಟಿದೆ. ಆ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು. ಈ ವಿಚಾರವಾಗಿ ದೇಶದ ಪ್ರತಿಯೊಬ್ಬರಿಗೂ ಅರಿವು ಅಗತ್ಯ. ‘ಅಂಬೇಡ್ಕರ್ ಕೊಲಾಜ್’ ನಾಟಕವು ನಮ್ಮ ಅರಿವನ್ನು ವಿಸ್ತರಿಸುತ್ತದೆ ಎಂದರು.

ಮುಖಂಡ ಸು.ಧಾ ವೆಂಕಟೇಶ್, ನಾಟಕವನ್ನು ಅಂಬೇಡ್ಕರ್ ವಾದಿಗಳಷ್ಟೇ ಅಲ್ಲ ಎಲ್ಲರೂ ವೀಕ್ಷಿಸಬೇಕು. ಅಂಬೇಡ್ಕರ್ ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.

ಮುಖಂಡ ಬಿ.ವಿ.ಆನಂದ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-16-1322377604

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.