ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಸಮೀಪವಿದ್ದರೂ ಚಿಕ್ಕಬಳ್ಳಾಪುರದಲ್ಲಿ ನಾಟಕ ಪ್ರದರ್ಶನಗಳು ಅಪರೂಪ ಎನ್ನುವಂತಿತ್ತು. ಬೆಂಗಳೂರಿನ ದೊಡ್ಡ ಸಂಖ್ಯೆಯ ನಾಟಕ ತಂಡಗಳು ನೆರೆಯ ಚಿಕ್ಕಬಳ್ಳಾಪುರದತ್ತ ಕಾಲಿಡುತ್ತಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಸುಸಜ್ಜಿತ ಭವನ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ನಾಟಕ ಸಂಸ್ಕೃತಿಗೆ ಬಲವಿರಲಿಲ್ಲ. ಅಲ್ಲೊಂದು ಇಲ್ಲೊಂದು ಪ್ರದರ್ಶನಗಳು ಶಾಲಾ, ಕಾಲೇಜು ಅಂಗಳದಲ್ಲಿ ನಡೆಯುತ್ತಿದ್ದವು.

ಆದರೆ ನಗರದಲ್ಲಿ ಕನ್ನಡ ಭವನ ನಿರ್ಮಾಣದ ತರುವಾಯ ಚಿಕ್ಕಬಳ್ಳಾಪುರದಲ್ಲಿ ದಿನದಿಂದ ದಿನಕ್ಕೆ ನಾಟಕ ಪ್ರದರ್ಶನವು ಹೆಚ್ಚುತ್ತಲೇ ಇದೆ. ವಿಶೇಷವಾಗಿ ‘ನಾಟಕೋತ್ಸವ’ಗಳು ಕನ್ನಡ ಭವನ ವೇದಿಕೆಯಾಗಿದೆ.

‘ಸುಗ್ಗಿ ನಾಟಕೋತ್ಸವ’, ‘ಕುವೆಂಪು ನಾಟಕೋತ್ಸ’ಗಳು ನಡೆದಿವೆ.

‘ವಿದುರಾಶ್ವತ್ಥ ಹತ್ಯಾಕಾಂಡ’ ಕೋಲಾರದ ಏಳು ಹೆಜ್ಜೆಗಳ ರಂಗ ಪಯಣ ‘ಬುಡ್ಡಿದೀಪ’ದಿಂದ ‘ಅಂಬೇಡ್ಕರ್ ಕೊಲಾಜ್’ ನಾಟಕ ಪ್ರದರ್ಶನಗಳು ಆಗಿವೆ. ‘ಡರ್ ಬರ್ ಬುಡ್ಡಣ್ಣ’, ‘ಶೂದ್ರ ತಪಸ್ವಿ’, ‘ಕೊಡಲ್ಲ ಅಂದ್ರೆ ಕೊಡಲ್ಲ’, ‘ಮುಲ್ಲಾ ನಸ್ರುದ್ದೀನ್’, ‘ಮುದುಕನ ಮದುವೆ’, ಐಶ್ವರ್ಯ ಕಲಾನಿಕೇತನ ಸಂಸ್ಥೆಯಿಂದ ‘ಮಿಸ್ ಸೇವಂತಿ’ ಹಾಸ್ಯ ನಾಟಕ ಪ್ರದರ್ಶನ ನಡೆದಿದೆ. ಹೀಗೆ ಕನ್ನ ಭವನ ಉದ್ಘಾಟನೆಯಾದ ನಂತರ 20ಕ್ಕೂ ಹೆಚ್ಚು ನಾಟಕಗಳು ಇಲ್ಲಿ ಪ್ರದರ್ಶನವಾಗಿವೆ.

ಒಂದು ಸಾವಿರ ಮಂದಿ ಕನ್ನಡ ಭವನದಲ್ಲಿ ನಾಟಕ ವೀಕ್ಷಿಸಬಹುದು. ನಾಟಕಕ್ಕೆ ಅಗತ್ಯವಾದ ಧ್ವನಿ, ಬೆಳಕು ಸೇರಿದಂತೆ ವ್ಯವಸ್ಥೆಗಳು ಉತ್ತಮವಾಗಿವೆ. ಈ ಕಾರಣದಿಂದ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ.

ಈ ಹಿಂದೆ ಅಂಬೇಡ್ಕರ್ ಭವನ, ಕಾಲೇಜುಗಳ ಸಭಾಂಗಣಗಳಲ್ಲಿ ನಾಟಕಗಳು ಪ್ರದರ್ಶನವಾಗುತ್ತಿದ್ದವು. ಆದರೆ ಇಲ್ಲಿ ರಂಗ ಪ್ರಯೋಗಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ನಾಟಕಗಳು ಪರಿಣಾಮಕಾರಿಯಾಗಿ ಮೂಡಿ ಬರುತ್ತಿರಲಿಲ್ಲ. ಆದರೆ ಈಗ ಧ್ವನಿ, ಬೆಳಕು, ಪರದೆ ಸೇರಿದಂತೆ ಸೂಕ್ತ ವ್ಯವಸ್ಥೆಗಳು ಇಲ್ಲಿವೆ. ಅಲ್ಲದೆ ತಾಲೀಮಿಗೂ ಅವಕಾಶಗಳಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿಗೆ ರಾಜ್ಯದ ಬೇರೆ ಬೇರೆ ಭಾಗಗಳ ನಾಟಕ ತಂಡಗಳು ಬಂದು ಪ್ರದರ್ಶನ ನೀಡುತ್ತಿದ್ದವು. ಸ್ಥಳದ ಕೊರತೆಯ ಕಾರಣ ಚಿಕ್ಕಬಳ್ಳಾಪುರದಲ್ಲಿ ನಾಟಕ ಪ್ರದರ್ಶನಗಳು ಕಡಿಮೆ ನಡೆಯುತ್ತಿದ್ದರು. ಆದರೆ ಈಗ ಕನ್ನಡ ಭವನವು ಚಿಕ್ಕಬಳ್ಳಾಪುರಕ್ಕೆ ನಾಟಕದ ಕಳೆ ತಂದಿದೆ.

ಮತ್ತಷ್ಟು ನಾಟಕೋತ್ಸವಗಳು

‘ಪೌರಾಣಿಕ ನಾಟಕೋತ್ಸವ ಸೇರಿದಂತೆ ಮತ್ತಷ್ಟು ನಾಟಕೋತ್ಸವಗಳು ಕನ್ನಡ ಭವನದಲ್ಲಿ ನಡೆಯಲಿವೆ. ಈಗಾಗಲೇ ನಾಟಕೋತ್ಸವ ಸಂಘಟಕರು ನಮ್ಮ ಕಚೇರಿ ಸಂಪರ್ಕಿಸಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವ ದಿನ ಭವನವು ಖಾಲಿ ಇರಲಿದೆ ಎನ್ನುವ ಮಾಹಿತಿ ಪಡೆದಿದ್ದಾರೆ. ನಾಟಕಗಳ ಪ್ರದರ್ಶನಕ್ಕೆ ಉತ್ತಮ ವ್ಯವಸ್ಥೆ ಇರುವ ಕಾರಣ ಹೆಚ್ಚು ರಂಗ ಪ್ರಯೋಗಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಟಕಗಳ ಪ್ರದರ್ಶನ ನಡೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.