ಚಿಕ್ಕಬಳ್ಳಾಪುರ: ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಕಲ ರಂಗ ಹೆಜ್ಜೆ ಸಂಸ್ಥೆ ಹಮ್ಮಿಕೊಂಡಿದ್ದ ಒಂದು ತಿಂಗಳ ‘ವಸಂತ ಚಿಟ್ಟೆಗಳು’ ಬೇಸಿಗೆ ಶಿಬಿರದ ಸಮಾರೋಪ ಈಚೆಗೆ ನಡೆಯಿತು.

ಸಮಾರಂಭವು ಭಾಷಣಕ್ಕೆ ಸೀಮಿತವಾಗದೆ ಸಂಪೂರ್ಣವಾಗಿ ಸಂಸ್ಕೃತಿಕ ಮತ್ತು ನಾಟಕ ಪ್ರದರ್ಶನದ ಮೂಲಕ ಜರುಗಿತು. ಕಂಸಾಳೆ ,ಕೋಲಾಟ, ಮಾರಿ ಕುಣಿತ ಸೇರಿದಂತೆ ಜಾನಪದ ನೃತ್ಯಗಳನ್ನು ಪ್ರದರ್ಶಿಸಲಾಯಿತು.

ಬಿ.ವಿ ಕಾರಂತರ ರಚನೆಯ ‘ಪಂಜರ ಶಾಲೆ’ ನಾಟಕವು ಅಭಿಷೇಕ್ ಆರ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದಿತು. ಚಂದ್ರಶೇಖರ ಕಂಬಾರ ರಚನೆಯ ‘ಕಲ್ಯಾಣದ ಕೂಗು’ ನಾಟಕ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿತು. ಅ.ನಾ. ರಾವ್ ಜಾದವ್ ಅವರ ರಚನೆಯ ಸೋಮು ಪಾಟೀಲ್ ನಿರ್ದೇಶನದಲ್ಲಿ ‘ಬೆಕ್ಕಿಗೆ ಗಂಟೆ ಕಟ್ಟಿದವರು ಯಾರು’ ನಾಟಕ ಪ್ರದರ್ಶಿಸಲಾಯಿತು.

ರಂಗಕರ್ಮಿ ಸಿ. ಬಸವಲಿಂಗಯ್ಯ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವಿ ನವೀನ್ ಕಿರಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಚಾಲಕ ಪಾತ ಮುತ್ತಕಹಳ್ಳಿ ಮು. ಚಲಪತಿ ಗೌಡ, ಕಲಾ ಶಿಕ್ಷಕ ಸತೀಶ್ ಸಿ.ಎಲ್, ರಂಗಕರ್ಮಿಗಳಾದ ಡಿಂಗ್ರಿ ನರೇಶ್, ಗಾ.ನ ಅಶ್ವತ್ಥ್, ದಸಂಸದ ರಾಜ್ಯ ಸಂಘಟನಾ ಸಂಚಾಲಕ ಸು.ಧಾ ವೆಂಕಟೇಶ್, ಸಾಹಿತಿ ಎಂ ಮಹದೇವಪ್ಪ ತಾಳಗುಂದ ಮತ್ತಿತರರು ಪಾಲ್ಗೊಂಡಿದ್ದರು.

300ಕ್ಕೂ ಹೆಚ್ಚು ಮಕ್ಕಳು, ಪೋಷಕರು, ಕಲಾ ಪ್ರೇಮಿಗಳು ಮಕ್ಕಳ ನಾಟಕೋತ್ಸವ ಮತ್ತು ಜಾನಪದ ಸಾಂಸ್ಕೃತಿಕ ರಂಗ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-16-1506193235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.