ಚಿತ್ರದುರ್ಗ: ‘ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ನಟನೆ, ಕಲಾ ಕೌಶಲ ನಶಿಸುತ್ತಿವೆ. ರಂಗಕಲೆ ಉಳಿಸಿ ಬೆಳೆಸುವ ಹೊಣೆ ಕಲಾ ಪ್ರೇಮಿಗಳ ಮೇಲಿದೆ’ ಎಂದು ರಂಗಭೂಮಿ ಕಲಾವಿದ ರಾಮುಭೋದೆ ತಿಳಿಸಿದರು.

ನಗರದ ವೆಸ್ಟರ್ನ್ ಹಿಲ್ಸ್ ವಿದ್ಯಾಲಯದಲ್ಲಿ ಶುಕ್ರವಾರ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಲವರಿಗೆ ಕಲೆಗೆ ತಕ್ಕ ಅವಕಾಶಗಳು ಸಿಕ್ಕರೂ ಕೆಲವೊಮ್ಮೆ ಅರ್ಹತೆಯುಳ್ಳ ಪ್ರತಿಭೆಗಳು ಮುನ್ನೆಲೆಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ನಾಟಕಗಳು ತೆರೆಮರೆಗೆ ಸರಿಯುತ್ತಿವೆ. ಚುಟುಕು ಸಿನಿಮಾ, ರೀಲ್ಸ್ ಹಾಗೂ ಮೊಬೈಲ್ ಭರಾಟೆಯಲ್ಲಿ ರಂಗಭೂಮಿ ಕಲೆ ವಿನಾಶದ ಅಂಚಿನಲ್ಲಿವೆ. ಈ ಹಿಂದೆ ಹಬ್ಬ ಹರಿದಿನಗಳಲ್ಲಿ ರಾತ್ರಿಯಿಡೀ ನಾಟಕ ಪ್ರದರ್ಶನ ನಡೆಯುತ್ತಿದ್ದವು. ಆದರೆ ಆ ಸಂಸ್ಕೃತಿ ದೂರವಾಗುತ್ತಿದೆ’ ಎಂದು ಪತ್ರಕರ್ತ ಸಿದ್ದರಾಜು ತಿಳಿಸಿದರು.

ಪ್ರಾಂಶುಪಾಲೆ ಡಿ.ಮಂಜುಳಾ, ಗಾಯಕ ಪ್ರಜ್ವಲ್, ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-44-934913257

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.