ದಾವಣಗೆರೆ: ‘ನಗರದ ರೋಟರಿ ಬಾಲಭವನದಲ್ಲಿ ಮೇ 31ರಂದು ‘ರಂಗದಂಗಳದಲ್ಲಿ ತಿಂಗಳ ಪ್ರತಿಭೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ದಾವಣಗೆರೆ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹೇಶ್ವರಪ್ಪ ದೊಡ್ಡಮನಿ ತಿಳಿಸಿದರು.

‘ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಂಗಕರ್ಮಿ ರಾಜಣ್ಣ ಜೇವರ್ಗಿ ಅವರ ಜೊತೆ ಸಂವಾದ ನಡೆಯಲಿದೆ. ನಂತರ ರಂಗಗೀತೆ, ಜನಪದ ಗೀತೆ, ಭಾವಗೀತೆ, ಭಕ್ತಿ ಗೀತೆ ಹಾಗೂ ಹಳೆಯ ಚಿತ್ರಗೀತೆಗಳ ಗಾಯನ ನಡೆಯಲಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಚಿಂದೋಡಿ ಚಂದ್ರಧರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ನಿವೃತ್ತ ಬ್ಯಾಂಕ್ ನೌಕರ ಎ. ಕೊಟ್ರಪ್ಪ ಕಿತ್ತೂರು, ವಕೀಲ ನಾಗರಾಜ್ ಕುಡುಪಲಿ, ಎನ್.ಎಸ್. ರಾಜು, ಬಸವರಾಜ ಐರಣಿ ಹಾಗೂ ಇತರರು ಭಾಗಿಯಾಗಲಿದ್ದಾರೆ. ಪ್ರತಿ ತಿಂಗಳೂ ಒಬ್ಬ ರಂಗ ಸಾಧಕರನ್ನು ಕರೆಸಿ ಅವರ ಜೊತೆ ಸಂವಾದ ನಡೆಸುವ ಉದ್ದೇಶವಿದೆ’ ಎಂದು ತಿಳಿಸಿದರು.

‘ರಂಗ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಎ. ಭದ್ರಪ್ಪ ಹೇಳಿದರು.

ಕೊಟ್ರೇಶ್ ಕೆ.ಎಸ್. ನಾಗವೇಣಿ ಜಿ. ಹಾಗೂ ಭವಾನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-43-1548422944

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.