ದಾವಣಗೆರೆ: ‘ವೃತ್ತಿ ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದೊಂದು ಅಮೃತ ಸಿಂಚನವಿದ್ದಂತೆ. ಹಿರಿಯ ಕಲಾವಿದರು ಈ ರಂಗವನ್ನು ಕಟ್ಟಿ ಬೆಳೆಸಿದ ಹಾದಿ ಅತ್ಯಂತ ಮಹತ್ವದ್ದು’ ಎಂದು ಹಿರಿಯ ರಂಗಕರ್ಮಿ ಲಕ್ಷ್ಮಣದಾಸ್ ತುಮಕೂರು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ವೃತ್ತಿ ರಂಗಭೂಮಿ ರಂಗಾಯಣದ ವತಿಯಿಂದ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರಾಭಿನಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಹಳೆಯ ಮೈಸೂರು ಭಾಗದಲ್ಲಿ ವೃತ್ತಿ ರಂಗಭೂಮಿ ಎಂದ ಕೂಡಲೇ ದಾವಣಗೆರೆಯ ನೆನಪು ಬರುತ್ತದೆ. ಇಲ್ಲಿನ ಹಿರಿಯ ಕಲಾವಿದರು ವೃತ್ತಿ ರಂಗಭೂಮಿಯನ್ನು ಶೃಂಗರಿಸಿ, ವೈಭವದಿಂದ ಮೆರೆಸಿ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಇಂತಹ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

‘ಹವ್ಯಾಸಿ ನಾಟಕಗಳ ಕಲಾವಿದರು ಪೂರ್ವಾಪರ ಆಲೋಚಿಸದೆ ತಮಗೆ ತೋಚಿದ್ದನ್ನು ಮಾಡುತ್ತಾ, ಅದೇ ಸರ್ವಸ್ವ ಎಂದು ನಂಬುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಹಿರಿಯರು ಹಾಕಿಕೊಟ್ಟ ದಾರಿಯನ್ನು ಹುಡುಕುವುದು ಹೇಗೆ ಮತ್ತು ಅದನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಬಿಕ್ಕಟ್ಟು ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜನರು ಮೊಬೈಲ್ ಬಳಕೆ ಯಿಂದಾಗಿ ಒಬ್ಬಂಟಿಯಾಗುತ್ತಿದ್ದು, ಸಮೂಹದೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದಾರೆ. ಹೊಸ ವಿಚಾರಗಳು ಬಂದಾಗ ಜನರು ಅತ್ತ ಆಕರ್ಷಿತರಾಗುವುದು ಸಹಜ. ಆದರೆ, ಗುಣಮಟ್ಟದ ಕಲೆಗೆ ಜನರು ಮತ್ತೆ ಮರಳುತ್ತಾರೆ’ ಎಂದು ದಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಸತೀಶ್ ಪಿ. ವಲ್ಲೇಪುರೆ ವಿಶ್ವಾಸ ವ್ಯಕ್ತಪಡಿಸಿದರು.

ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಕೆ. ನಾಗರತ್ನಮ್ಮ, ಬಿ.ಪರಶುರಾಮ್, ಹಿರಿಯ ರಂಗಕರ್ಮಿ ಎಸ್.ಎಸ್. ಸಿದ್ಧರಾಜು ಉಪಸ್ಥಿತರಿದ್ದರು.

ವತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು. ಡಿ.ಎಸ್. ದೇವಸೇನಾ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-43-690708111

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.